ಮಂಜೇಶ್ವರ: ಆರೋಗ್ಯಕರ ಆಹಾರ ಸೇವನೆಯು ಬಹುತೇಕ ರೋಗಗಳು ಬಾರದಂತೆ ತಡೆಯುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಲಬೆರಕೆ ಇಲ್ಲದ ಆಹಾರೋತ್ಪನ್ನಗಳಿಗೆ ಆದ್ಯತೆ ನೀಡಿದರೆ ಉನ್ನತ ಆರೋಗ್ಯದಿಂದ ಜೀವನ ಮುನ್ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ರಸಾಲದಂತಹ ಶುದ್ದ, ರುಚಿಕರ ಪಾರಂಪರಿಕ ಶೈಲಿಯ ಆಹಾರೋತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭವಿಷ್ಯವಿದೆ ಎಂದು ವೆಂಕಟೇಶ್ವರ ಪ್ರಸಾದ್ ತಿಳಿಸಿದರು.
ಮೀಯಪದವು ಎಚ್.ಕೆ.ಫುಡ್ ಪ್ರಾಡಕ್ಟ್ ಹೊರತಂದಿರುವ ರಸಾಲ ಗೃಹೋತ್ಪನ್ನಗಳ ಇತ್ತೀಚೆಗೆ ನಡೆದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಸಾಲ ಬ್ರಾಂಡ್ ನ ಸಾಂಬಾರ ಹುಡಿ, ರಸಂ ಹುಡಿ, ಕಷಾಯ ಹುಡಿ ಮತ್ತು ಒಣಶುಂಠಿಗಳನ್ನು ಈ ಸಂದರ್ಭ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಪಾಕತಜ್ಞ ರಾಘವೇಂದ್ರ ಮಯ್ಯ, ಸಂಸ್ಥೆಯ ಮಾಲಕ ಕೇಶವ ಪ್ರಸಾದ್, ಕುಂಬಳೆಯ ಶಂಕರಪ್ರಸಾದ್ ಮಜಲು ಉಪಸ್ಥಿತರಿದ್ದರು. ವಿಕ್ರಂ ಭಾರದ್ವಾಜ್ ಸ್ವಾಗತಿಸಿ, ಶಂಕರನಾರಾಯಣ ಭಟ್ ವಂದಿಸಿದರು. ಕು.ಅನುಜ್ಞಾ ಹಾಗೂ ಕು.ಅನನ್ಯ ಪ್ರಾರ್ಥನೆ ಹಾಡಿದರು.





