ಕಾಸರಗೋಡು: ರೈಲ್ವೇ, ಸಿವಿಲ್ ಏವಿಯೇಷನ್ ವಲಯಗಳ ಶಿಕ್ಷಣ ಮತ್ತು ನೌಕರಿ ಸಾಧ್ಯತೆಗಳ ಕುರಿತು ಯುವಜನತೆಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಯುವಜನ ಕ್ರೀಡಾ ಮಂತ್ರಾಲಯ ವತಿಯಿಂದ ವೆಬಿನಾರ್ ಶೀಘ್ರದಲ್ಲಿ ನಡೆಸಲಾಗುವುದು.
ಸರಕಾರಿ, ಅರೆ ಸರಕಾರಿ ವಲಯಗಳ ಏವಿಯೇಷನ್ ಕೋರ್ಸ್ ಗಳ ಕುರಿತು, ಕಮರ್ಶಿಯಲ್ ಪೈಲೆಟ್, ಏರ್ ಹಾಸ್ಟೆಸ್, ಲಾಜಿಸ್ಟಿಕ್ ಮೆನೆಜ್ ಮೆಂಟ್, ರೈಲ್ವೇ ಮಂತ್ರಾಲಯ ನಡೆಉಸವ ಬಿ.ಟೆಕ್ ಸಹಿತ ಕೋರ್ಸ್ ಗಳು, ಪ್ರವೇಶಾತಿ ಕ್ರಮ ಇತ್ಯಾದಿಗಳ ವಿವರಣೆಯನ್ನೂ ನೀಡಲಾಗುವುದು. ಖಾಸಗಿ ವಲಯಗಳಲ್ಲಿ ಚಟುವಟಿಕೆ ನಡೆಸುವ ಸಂಸ್ಥೆಗಳ ಕುರಿತು, ವಿದ್ಯಾರ್ಥಿಗಳ ಸಂಶಯ ನಿವಾರಣೆ ನಡೆಸಲಾಗುವುದು. ವೆಬಿನಾರ್ ನಲ್ಲಿ ಭಾಗವಹಿಸಲು ಆಸಕ್ತರಿಗೆ ಲಿಂಕ್ ಲಭಿಸುವ ನಿಟ್ಟಿನಲ್ಲಿ ದೂರವಾಣಿ ಸಂಖ್ಯೆ: 9037571880 ಯನ್ನು ಸಂಪರ್ಕಿಸಬಹುದು.




