ಕಾಸರಗೋಡು: ಕಾಸರಗೋಡು ನಗರಸಭೆಯಲ್ಲಿ ವಾರ್ಡ್ ಮಟ್ಟದ ವಾಕ್ಸಿನೇಷನ್ ಶಿಬಿರ ಜು.14ರಿಂದ ಜರುಗಲಿದೆ.
ನಗರಸಭೆಯ ಪರಸ್ಪರ ಹತ್ತಿರವಿರುವ ಮೂರು ವಾರ್ಡ್ ಗಳನ್ನು ಒಂದು ಕ್ಲಸ್ಟರ್ ಆಗಿಸಿ ಸೌಕರ್ಯದಾಯಕ ಕೇಂದ್ರವೊಂದರಲ್ಲಿ ವಾಕ್ಸಿನೇಷನ್ ಶಿಬಿರ ನಡೆಸಲಾಗುವುದು. ಒಟ್ಟು 12 ಕೇಂದ್ರಗಳಿರುವುವು. ಪ್ರತಿ ವಾರ್ಡ್ ನಿಂದ 150 ಮಂದಿಗೆ ಅವಕಾಶಗಳಿವೆ. ವಿದ್ಯಾರ್ಥಿಗಳು, ವಯೋವೃದ್ಧರು, ವಿಶೇಷಚೇತನರು, ಕೋವೀಶೀಲ್ಡ್ ಲಸಿಕೆ ಮೊದಲ ಡೋಸ್ ಸ್ವೀಕರಿಸಿ, 84 ದಿನಗಳು ಕಳೆದು ಎರಡನೇ ಡೋಸ್ ಗಾಗಿ ಕಾಯುತ್ತಿರುವವರು, ಆನಿವಾಸಿ ಭಾರತೀಯರು ಮೊದಲಾದವರಿಗೆ ಆದ್ಯತೆಯಿದೆ. ಮೊದಲ ಹಂತದ ಶಿಬಿರ ಪೂರ್ಣಗೊಂಡ ತಕ್ಷಣ ಎರಡನೇ ಹಂತದ ಶಿಬಿರ ನಡೆಸಲಾಗುವುದು. ಬೆಳಗ್ಗೆ 9 ರಿಂದ ಮಧ್ಯಾಹ್ನ 3.30 ವರೆಗೆ ಲಸಿಕೆ ನೀಡಲಾಗುವುದು.
ಜು.14: ತೆರುವತ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ-ವಾರ್ಡ್ ನಂಬ್ರ 22,23,24.
ಕಡಪ್ಪುರಂ ಪಿಷರೀಸ್ ಅಕ್ವ ಟ್ರೈನಿಂಗ್ ಸೆಂಟರ್- ವಾರ್ಡ್ ನಂಬ್ರ 36,37,38,1.
ಜು.15: ಬದಿರ ಪಿ.ಟಿ.ಎಂ.ಎ.ಹಿರಿಯ ಪ್ರಾಥಮಿಕ ಶಾಲೆ-ವಾರ್ಡ್ ನಂಬ್ರ 11,12,13.
ಕೊಲ್ಲಂಪಾಡಿ ಬದ್ರುಲ್ ಹುದಾ ಮದ್ರಸಾ-ವಾರ್ಡ್ ಗಳು 14,15,16.
ಜು.16: ಅಣಂಗೂರು ಶಾರದಾಂಬಾ ಕಲ್ಯಾಣ ಮಂಟಪ-ವಾರ್ಡ್ ನಂಬ್ರ 8,9,10.
ನೂತನ ಬಸ್ ನಿಲ್ದಾಣ ದಿನೇಶ್ ಬೀಡಿ ಕಂಪನಿ- ವಾರ್ಡ್ ನಂಬ್ರ 17,7,6.
ಜು.17-ನೆಲ್ಲಿಕುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ-ವಾರ್ಡ್ ನಂಬ್ರ 2,34,35.
ತಾಯಲಂಗಾಡಿ ಮದ್ರಸಾ-ವಾರ್ಡ್ ನಂಬ್ರ 20,31,32.
ಜುಲೈ 19: ತಳಂಗರೆ ಸರಕಾರಿ ಎಂ.ವಿ.ಎಚ್.ಎಸ್-ವಾರ್ಡ್ ನಂಬ್ರ 25,26,30.
ಕಂಡತ್ತಿಲ್ ಎಚ್.ಎಸ್.ಮದ್ರಸಾ-ವಾರ್ಡ್ ನಂಬ್ರ 27,28,29.
ಜು.22: ಅಡ್ಕತ್ತಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- ವಾರ್ಡ್ ನಂಬ್ರ 3,5,4,33.
ಪಿಲಿಕುಂಜೆ ನಗರಸಭೆ ಸಭಾಂಗಣ- ವಾರ್ಡ್ ನಂಬ್ರ 18,19, 21.


