ಉಪ್ಪಳ: ಮಂಗಲ್ಪಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವವರು ಎಚ್ಚರದಿಂದ ಇರಬೇಕಾಗಿದೆ. ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಯ್ಯಾಂಟಿ ವೇಸ್ಟ್ ಡಿಸೋಲ್ ವಿಜಿಲೆನ್ಸ್ ಸ್ಕೋಡ್ ರೂಪೀಕರಣಗೊಳಿಸಿ ಕ್ರಮಕ್ಕೆ ಮುಂದಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಉಪ್ಪಳಗೇಟ್ ಬಳಿಯಿಂದ ಬಂದ್ಯೋಡು ತನಕ ಅಲ್ಲಲ್ಲಿ ವ್ಯಾಪಕ ತ್ಯಾಜ್ಯಗಳು ಉಪೇಕ್ಷಿಸಲಾಗುತ್ತಿದೆ. ಆಹಾರ ತ್ಯಾಜ್ಯ, ಮನೆಯಲ್ಲಿ ಉಪಯೋಗ ಶೂನ್ಯಗೊಂಡ ವಸ್ತುಗಳ ಸಹಿತ ಇತರ ತ್ಯಾಜ್ಯಗಳು ಉಪೇಕ್ಷಿಸುವುದು ಸರ್ವೇ ಸಾಮಾನ್ಯವಾಗಿದೆ. ಪ್ರದೇಶದಲ್ಲಿ ಡೆಂಗ್ಯೂ ಜ್ವರ, ಮಲೇರಿಯ ಮೊದಲಾದ ಅಸೌಖ್ಯಗಳು ವ್ಯಾಪಲಗೊಳ್ಳುವುದರಿಂದ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮಾಲಿನ್ಯವನ್ನು ಎಸೆಯಬಾರದೆಂದು ಈ ಹಿಂದೆ ಹಲವು ಭಾರಿ ನಿರ್ದೇಶನವನ್ನು ನೀಡಲಾಗಿದೆ.
ಆದರೆ ಅದು ಫಲ ಕಾಣದ ಹಿನ್ನೆಲೆಯಲ್ಲಿ ಪಂಚಾಯತ್ ಆಡಳಿತ ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಯ್ಯಾಂಟಿ ವೇಸ್ಟ್ ಡಿಸೋಲ್ ವಿಜಿಲೆನ್ಸ್ ಸ್ಕೋಡ್ ನ್ನು ರೂಪೀಕರಣಗೊಳಿಸಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಮಾಲಿನ್ಯ ಎಸೆಯುವುದು ಗಮನಕ್ಕೆ ಬಂದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು. ಅವರಿಂದ 2ಸಾವಿರಕ್ಕಿಂತ ಮೇಲೆ ದಂಡ ನೀಡಬೇಕಾಗಿದೆ. ಆದರೆ ಮತ್ತೆ ಅದೇ ಕೃತ್ಯವನ್ನು ನಡೆಸಿದಲ್ಲಿ ಪಂಚಾಯತ್ ನಿಯಮ ಹಾಗೂ ಕಾನೂನು ಪ್ರಕಾರ 10ರಿಂದ 25 ಸಾವಿರ ತನಕ ದಂಡ ಪಾವತಿಸಬೇಕಾದೀತು ಜೊತೆಯಲ್ಲಿ ಜಾಮೀನು ಇಲ್ಲದ ಕೇಸು ದಾಖಲಿಸುವ ಕ್ರಮಕೈಗೊಳ್ಳಲಾಗುವುದೆಂದು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.





