HEALTH TIPS

ರಾತ್ರೋರಾತ್ರಿ ಹಠಾತ್ತನೇ ಲಾಕ್ ಡೌನ್ ಘೋಷಿಸಿದ ಅಬು ಧಾಬಿ

               ದುಬೈಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಆತಂಕದ ಹಿನ್ನೆಲೆಯಲ್ಲಿ ದಿಢೀರನೆ ಗುರುವಾರ ತಡರಾತ್ರಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

              ದೇಶದ ಉಳಿದ ಭಾಗಗಳು ಪ್ರವಾಸೋದ್ಯಮಕ್ಕೆ ಮುಕ್ತವಾಗಿದ್ದರೂ ಸಹ ಅಬುಧಾಬಿ ಮಾತ್ರ ಈ ನಿರ್ಧಾರಕ್ಕೆ ಬಂದಿದೆ. ಸೋಮವಾರದಿಂದ ಲಾಕ್‌ಡೌನ್ ಪ್ರಾರಂಬಿವಾಗಲಿದ್ದು, ಪ್ರತಿದಿನ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 5 ಗಂಟೆವರೆಗೆ ಇರುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಡಬ್ಲ್ಯುಎಎಂ ಸುದ್ದಿ ಸಂಸ್ಥೆ ತಿಳಿಸಿದೆ.

               ಸೋಮವಾರದಿಂದ ಯುಎಇಯಲ್ಲಿ ಯುಎಇ ಸುದೀರ್ಘ ಈದ್ ಅಲ್-ಅಧಾ ರಜಾದಿನಗಳು ಆರಂಭವಾಗುತ್ತಿವೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಬುಧಾಬಿ ಪ್ರವೇಶಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಲಾಕ್‌ಡೌನ್ ಘೋಷಿಸಲಾಗಿದೆ ಎನ್ನಲಾಗಿದೆ.

              ವರ್ಷದ ಹಿಂದೆ ದುಬೈ ಪ್ರವಾಸೋದ್ಯಮಕ್ಕೆ ಅನುಮತಿ ನೀಡಿದ ನಂತರ ಅಬುಧಾಬಿ ಕಠಿಣ ನಿಲುವು ತಳೆದಿತ್ತು. ಅಬುಧಾಬಿ ಪ್ರವೇಶಿಸುವವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿ ಕಡ್ಡಾಯಗೊಳಿಸಲಾಗಿತ್ತು. ಸಾಮೂಹಿಕ ಲಸಿಕಾ ಕಾರ್ಯಕ್ರಮದ ಹೊರತಾಗಿಯೂ ದುಬೈನಲ್ಲಿ ನಿತ್ಯ 1,500 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಡುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries