ಕೊಚ್ಚಿ: ಕೇರಳದಲ್ಲಿ ಕೊರೋನಾ ಪ್ರಕರಣಗಳ ಏರಿಕೆ ಮತ್ತು ರಕ್ಷಣಾ ಚಟುವಟಿಕೆಗಳ ವೈಫಲ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಭಾರೀ ಚರ್ಚೆಗೊಳಗಾಗಿದೆ. #CovidKeralaModelFailed ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಯುವ ಮೋರ್ಚಾ - ಬಿಜೆಪಿ ಕಾರ್ಯಕರ್ತರು ರಾಷ್ಟ್ರಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಅಭಿಯಾನವು ಕೊರೋನಾ ರಕ್ಷಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡುತ್ತದೆ.
‘ ನಾವು ಸೋತವರಲ್ಲ, ರಾಜ್ಯ ಸರ್ಕಾರ ನಮ್ಮನ್ನು ಸೋಲಿಸಿದೆ ಎಂದು ಸಂದೇಶ ಚರ್ಚಿತವಾಗಿದೆ. ಸಂಜೆಯ ಸುದ್ದಿಗೋಷ್ಟಿಯ ಮೂಲಕ ಪುಂಖಾನುಪುಂಖ ಹರಿದು ಬರುವ ಸುಳ್ಳಿನ ಸರಮಾಲೆ ಮತ್ತು ಶಬ್ದಾಡಂಬರದ ಡಾಂಬಿಕ ಸಿದ್ದ ಭಾಷಣಗಳು.... ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಹಾಳುಮಾಡುವ ಮೂರ್ಖ ನಿರ್ಧಾರಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ರಾಜ್ಯ ಸರ್ಕಾರದ ಮೇಲೆ ಇಷ್ಟೊಂದು ನಂಬಿಕೆ ಇರುವ ಬೇರೆ ಜನರು ಕೇರಳ ಹೊರತು ಬೇರೆಡೆ ಇರಲಾರರು.... ಆದರೂ ನಾವು ಮಾತ್ರ ಹೇಗೆ ಸೋತಿದ್ದೇವೆ ಎಂಬುದರ ಬಗ್ಗೆ ಇನ್ನಾದರೂ ಯೋಚಿಸಬೇಕು. ಟಿಪಿಆರ್ ಶೇಕಡಾ 10 ಕ್ಕೆ ತಲುಪಿದಾಗ, ಭಾರತದಲ್ಲೇ ಕೇರಳ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದ್ದು ಹಬ್ಬದ ಆಚರಣೆಗೆ ವಿನಾಯ್ತಿ ನೀಡುವ ವಿಜ್ಞಾನ ಯಾವುದು?....ಹೀಗೆ ಟ್ವಿಟರ್‌ನಲ್ಲಿ ಹಲವು ಪ್ರಶ್ನೆಗಳು ಎದ್ದಿವೆ.




