ಕಾಸರಗೋಡು: ಕೋವಿಡ್ ಮಹಾಮಾರಿಯ ಬಿಗಿಮುಷ್ಠಿಯ ಸಂಕಷ್ಟದ ಅವಧಿಯಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ಸ್ವಾತಂತ್ರ್ಯೋತ್ಸವ ಆಚರಣೆಗಳು ಯಾವುದೇ ರೀತಿಯಲ್ಲೂ ಪ್ರಭಾವವನ್ನು ಕಡಿತಗೊಳಿಸದೇ ವೈಭವದಿಂದ ಆಚರಣೆಗೊಂಡಿತು. ಎಲ್ಲ ಕಡೆಗಳಲ್ಲೂ ಕೋವಿಡ್ ಪ್ರತಿರೋಧ- ಕಟ್ಟುನಿಟ್ಟುಗಳ ಕಡ್ಡಾಯ ಪಾಲನೆಗಳೊಂದಿಗೆ ನಡೆದುವು.
ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಆಚರಣೆ ವಿದ್ಯಾನಗರದ ಕಾಸರಗೋಡು ನಗರಸಭೆ ಕ್ರೀಡಾಂಗಣದಲ್ಲಿ ಕೋವಿಡ್ ಕಟ್ಟುನಿಟ್ಟುಗಳ ಬಿಗಿ ಪಾಲನೆಯೊಂದಿಗೆ ನಡೆಯಿತು. ಬಂದರು, ವಸ್ತುಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ಅವರು ಧ್ವಜಾರೋಹಣ ನಡೆಸಿ, ಪಥಸಂಚಲನದ ವಂದನೆ ಸ್ವೀಕರಿಸಿದರು. ಪೆÇಲೀಸ್ ಪಡೆಯ ಮೂರು ಪ್ಲಾಟೂನ್ ಗಳು, ಅಬಕಾರಿ ದಳದ ಒಂದು ಪ್ಲಾಟೂನ್ ಮಾತ್ರ ಪಥಸಂಚಲನದಲ್ಲಿ ಭಾಗವಹಿಸಿದ್ದುವು. ನಿಗದಿತ ಆಹ್ವಾನಿತ ಮಂದಿ ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇತರ ತಂಡಗಳ ಪಥಸಂಚಲನ, ಪದಕ ಪ್ರದಾನ, ದೇಶಭಕ್ತಿಗೀತೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಕಟ್ಟುನಿಟ್ಟುಗಳ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್ ಮೊದಲಾದ ಅಧಿಕಾರಿಗಳು, ಸಂಸದ ರಾಜ್ ಮೋಹನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಇ.ಚಂದ್ರಶೇಖರನ್, ನ್ಯಾಯವಾದಿ ಸಿ.ಎಚ್.ಕುಂಞಂಬು, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ ಮೊದಲಾದವರು ಜತೆಗಿದ್ದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಧ್ವಜಾರೋಹಣ ನಡೆಸಿದರು. ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನಡೆಸಿದರು. ಸಹಾಯಕ ಜಿಲ್ಲಾಧಿಕಾರಿಗಳಾದ ರವಿಕುಮಾರ್ ಕೆ., ಸೂರ್ಯ ನಾರಾಯಣನ್, ಸಿರೋಷ್ ಪಿ. ಜಾನ್, ಹಣಕಾಸು ಅಧಿಕಾರಿ ಕೆ.ಸತೀಶನ್, ಕಾನೂನು ಅಧಿಕಾರಿ ಮುಹಮ್ಮದ್ ಕುಂuಟಿಜeಜಿiಟಿeಜ ಮೊದಲಾದವರು ಉಪಸ್ಥಿತರಿದ್ದರು.






