ಉಪ್ಪಳ: ಸರ್ಕಾರದ ಜನಪರ ಯೋಜನೆಯ ಬೆಳ್ಳಿಹಬ್ಬದಂಗವಾಗಿ ಪೈವಳಿಕೆ ಗ್ರಾಮ ಪಂಚಾಯತಿಯಲ್ಲಿ ಜರಗಿದ ರಜತವರ್ಷದ ಸಮಾರಂಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಅಚ್ಯುತ ಚೇವಾರ್, ಎಂ.ಚಂದ್ರ ನಾಯಕ್, ಜಯಲಕ್ಷ್ಮಿ ಭಟ್, ಮಣಿಕಂಠ ರೈ ಅವರನ್ನು ಸಮ್ಮಾನಿಸಲಾಯಿತು.ಗ್ರಾ.ಪಂ.ಅಧ್ಯಕ್ಷೆ ಜಯಂತಿ, ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.




