HEALTH TIPS

BREAKING: ಫ್ಯಾಷನ್ ಗೋಲ್ಡ್ ಹಗರಣ; ಎರಡನೇ ಆರೋಪಿ ಪೂಕೋಯ ತಂಙಳ್ ನ್ಯಾಯಾಲಯದಲ್ಲಿ ಶರಣು

                                              

             ಕಾಸರಗೋಡು: ಫ್ಯಾಷನ್ ಗೋಲ್ಡ್ ವಂಚನಾ  ಹಗರಣದ ಆರೋಪಿ ಟಿ ಕೆ ಪೂಕೋಯ ತಂಙಳ್ ಕೊನೆಗೂ ಶರಣಾಗಿದ್ದಾನೆ. ಇಂದು ಬೆಳಿಗ್ಗೆ ಹೊಸದುರ್ಗ ನ್ಯಾಯಾಲಯದಲ್ಲಿ  ಶರಣಾದನು. ಕಳೆದ ಒಂಬತ್ತು ತಿಂಗಳಿನಿಂದ ಆತ ತಲೆಮರೆಸಿಕೊಂಡಿದ್ದು, ತನಿಖೆಗೆ ಸವಾಲಾಗಿತ್ತು. 

                ಘಟನೆಗೆ ಸಂಬಂಧ ತಂಙಳ್ ಪ್ರಕರಣದ ಎರಡನೇ ಆರೋಪಿ. ಮೊದಲ ಆರೋಪಿ ಮಂಜೇಶ್ವರದ ಮಾಜೀ ಶಾಸಕ ಎಂ.ಸಿ. ಕಮರುದ್ದೀನ್ ನನ್ನು ಈ ಹಿಂದೆ ಪೋಲೀಸರು ಬಂಧಿಸಿ ಕಳೆದ ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆ ಮಾಡಿದ್ದರು. ಆದರೆ ತಂಙಳ್ ಸಿಕ್ಕಿಬೀಳುವ ಭಯದಿಂದ ತಲೆಮರೆಸಿಕೊಂಡಿದ್ದನು. 

           ಪೂಕೋಯ ತಂಙಳ್ ಫ್ಯಾಷನ್ ಗೋಲ್ಡ್ ಗ್ರೂಪ್ ನ ಎಂ.ಡಿ.ಯಾಗಿದ್ದು, ಚಿನ್ನದ ಠೇವಣಿ ಹಗರಣಕ್ಕೆ ಸಂಬಂಧಿಸಿದಂತೆ ಕಮರುದ್ದೀನ್ ಮತ್ತು ತಂಙಳ್ ವಿರುದ್ಧ ಪೋಲೀಸರು 100 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದ್ದಾರೆ. ಬಳಿಕ ಪೋಲೀಸರು ತನಿಖೆ ನಡೆಸುವ ಭಯದಿಂದ ತಲೆಮರೆಸಿಕೊಂಡಿದ್ದನು.  ಸಹ ಆರೋಪಿ ಕಮರುದ್ದೀನ್ ರನ್ನು ಬಂಧಿಸಿ ಜೈಲಿಗೆ ಹಾಕಿ ಬಳಿಕ ಬಿಡುಗಡೆಗೊಳಿಸಲಾಯಿತು. ಕಮರುದ್ದೀನ್ 93 ದಿನಗಳ ಜೈಲುವಾಸದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries