ತಿರುವನಂತಪುರಂ: ರಾಜ್ಯದ ಕೋವಿಡ್ ನಿಯಂತ್ರಣಗಳಲ್ಲಿ ಇನ್ನಷ್ಟು ರಿಯಾಯಿತಿಗಳನ್ನು ಘೋಷಿಸಲಾಗಿದೆ. ಇಂದು ನಡೆದ ಕೊರೋನಾ ಪರಿಶೀಲನಾ ಸಭೆಯಲ್ಲಿ ಮತ್ತಷ್ಟು ರಿಯಾಯಿತಿಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪರಿಶೀಲನಾ ಸಭೆಯಲ್ಲಿ, ಜನರು ಹೋಟೆಲ್ ಮತ್ತು ಬಾರ್ ಗಳಲ್ಲಿ ಕುಳಿತು ಊಟ ಮಾಡಲು ಯಾವುದೇ ಅಡ್ಡಿಯಿಲ್ಲ ಎಂದು ನಿರ್ಧರಿಸಲಾಯಿತು. ರಾಜ್ಯದಲ್ಲಿ ಬಾರ್ ತೆರೆಯಲು ಕೂಡ ನಿರ್ಧರಿಸಲಾಗಿದೆ.
ಎರಡು ಡೋಸ್ ಲಸಿಕೆ ತೆಗೆದುಕೊಂಡವರಿಗೆ ಬಾರ್‍ಗಳಿಗೆ ಪ್ರವೇಶ ಇರುತ್ತದೆ. ಹೋಟೆಲ್‍ಗಳು ಕೂಡ ಈ ಅವಶ್ಯಕತೆಯನ್ನು ಅನುಸರಿಸಬೇಕು. ಎಸಿ ಬಳಸಬಾರದು. ಒಟ್ಟು ಆಸನ ಸಾಮಥ್ರ್ಯದ 50 ಶೇ. ಪ್ರವೇಶ ಸೀಮಿತವಾಗಿರುತ್ತದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಭೆಯ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಈಗ ಚಿತ್ರಮಂದಿರಗಳನ್ನು ತೆರೆಯುವ ಅಗತ್ಯವಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಥಿಯೇಟರ್ ತೆರೆಯಲು ಪ್ರಸ್ತುತ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ನಿರ್ಣಯಿಸಲಾಗಿದೆ. ಶಾಲೆಗಳನ್ನು ಪುನರಾರಂಭಿಸುವ ನಿರ್ಧಾರದ ಬೆನ್ನಿಗೇ ಅನುಸರಿಸಬೇಕಾದ ಮಾರ್ಗಸೂಚಿಗಳಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.


