HEALTH TIPS

ಐಆರ್‌ಸಿಟಿಸಿಯ ಟಿಕೆಟ್ ಬುಕಿಂಗ್ ವೆಬ್ ಸೈಟ್ ನ ಅಸುರಕ್ಷತೆಯನ್ನು ಪತ್ತೆಹಚ್ಚಿದ ಶಾಲಾ ವಿದ್ಯಾರ್ಥಿ

                      ಚೆನ್ನೈ: ಭಾರತದ ಅತಿ ದೊಡ್ಡ ಇಟಿಕೆಟ್ ಬುಕಿಂಗ್ ಫ್ಲಾಟ್ಫಾರಂ ಆಗಿರುವ ಭಾರತೀಯ ರೈಲ್ವೆಯ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ ಲಿಮಿಟೆಡ್ (ಐಆರ್ಸಿಟಿಸಿ)ನ ಬುಕಿಂಗ್ ಸೈಟ್ನ ನಿಯಂತ್ರಣ ಅಸುರಕ್ಷತೆಯಿರುವುದನ್ನು 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಗಮನಕ್ಕೆ ತಂದ ಬಳಿಕ ಸಂಸ್ಥೆಯು ಈ ತಾಂತ್ರಿಕ ಲೋಪವನ್ನು ಸರಿಪಡಿಸಿದೆ.

            ಐಆರ್ಸಿಟಿಸಿಯ ಮಾಹಿತಿ ತಂತ್ರಜ್ಞಾನ ವಿಭಾಗವು ಶಾಲಾ ವಿದ್ಯಾರ್ಥಿಯತ ದೂರನ್ನು ಕೂಡಲೇ ಗಮನಕ್ಕೆ ತೆಗೆದುಕೊಂಡು, ತನ್ನ ಬುಕಿಂಗ್ ವೆಬ್ ಸೈಟ್ ನಲ್ಲಿನ ಸುರಕ್ಷತಾ ಲೋಪವನ್ನು ಸರಿಪಡಿಸಿತೆಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

            ''ನಮ್ಮ ಇ-ಟಿಕೆಟಿಂಗ್ ವ್ಯವಸ್ಥೆ ಈಗ ಸಂರಕ್ಷಿಸಲ್ಪಟ್ಟಿದೆ. ಈ ತಾಂತ್ರಿಕ ಸಮಸ್ಯೆಯುತ ಆಗಸ್ಟ್ 30ರಂದು ವರದಿಯಾಗಿತ್ತು ಹಾಗೂ ಸೆಪ್ಟೆಂಬರ್ 2ರಂದು ಅದನ್ನು ಸರಿಪಡಿಸಲಾಯಿತು ಎಂದವರು ತಿಳಿಸಿದರು.

           ಐಆರ್ಸಿಟಿಸಿಯ ವೆಬ್ಸೈಟ್ ನಲ್ಲಿ ಐಡಿಓಆರ್ ಎಂಬ ಒಂದು ವಿಧದ ಸಂಪರ್ಕ ನಿಯಂತ್ರಣ ಲೋಪವು ಇರುವುದನ್ನು ಅಕಸ್ಮತ್ತಾಗಿ ಕಂಡುಕೊಂಡೆನೆಂದು ತಮಿಳುನಾಡಿನ ಖಾಸಗಿ ಶಿಕ್ಷಣಸಂಸ್ಥೆಯೊಂದರ 12ನೇ ತರಗತಿ ವಿದ್ಯಾರ್ಥಿ ಪಿ.ರಂಗನಾಥನ್ ಹೇಳುತ್ತಾರೆ. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರ ಹಣಕಾಸು ವರ್ಗಾವಣೆಯ ವಿವರಗಳು ಸೋರಿಕೆಯಾಗಿವೆ ಎಂದು ಆತ ಹೇಳುತ್ತಾರೆ. ಇದರಿಂದಾಗಿ ಇತರರ ಪ್ರಯಾಣದ ಟಿಕೆಟ್ಗೆ ಸಂಬಂಧಪಟ್ಟ ವಿವರಗಳು ಹಾಗೂ ಸೂಕ್ಷ್ಮ ವಿವರಗಳು ಕೂಡಾ ಲಭ್ಯವಾಗುತ್ತವೆ.

                 ಇದರಿಂದಾಗಿ ಇತರ ಟಿಕೆಟ್ ಗಳನ್ನು ಬೇರೆಯವರು ಕೂಡಾ ರದ್ದುಪಡಿಸಬಹುದಾಗಿದೆ ಅಥವಾ ಇನ್ನಾವುದೇ ದುರುದ್ದೇಶಪೂರ್ವಕವಾದ ಕೃತ್ಯಗಳನ್ನು ಎಸಗಬಹುದಾಗಿದೆ ಎಂದು ರಂಗನಾಥನ್ ಹೇಳುತ್ತಾರೆ. ಈ ವಿಚಾರವಾಗಿ ತಾನು ಕೇಂದ್ರ ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸಿಇಆರ್ಟಿ-ಇನ್ ಗೆ ಇಮೇಲ್ ಮೂಲಕ ದೂರು ನೀಡಿದ್ದಾಗಿ ಆತ ಹೇಳಿದ್ದಾರೆ.

          ತಾನೋರ್ವ ತಾತ್ವಿಕವಾದ (ಎಥಿಕಲ್) ಹ್ಯಾಕರ್ ಹಾಗೂ ಸೈಬರ್ ಭದ್ರತಾ ಸಂಶೋಧಕನೆಂದು ರಂಗನಾಥನ್ ಹೇಳಿಕೊಂಡಿದ್ದಾರೆ. 2021ರ ಸೆಪ್ಟೆಂಬರ್ 11ರಂದು ಐಆರ್ಸಿಟಿಸಿಯ ಬುಕಿಂಗ್ ಜಾಲತಾಣದಲ್ಲಿ ಭದ್ರತಾ ಲೋಪವಿರುವುದನ್ನು ಗಮನಕ್ಕೆ ತಂದಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿ ತನಗೆ ಇಲಾಖೆಯಿಂದ ಪತ್ರವೊಂದು ಬಂದಿರುವುದಾಗಿ ರಂಗನಾಥನ್ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries