HEALTH TIPS

ದೆಹಲಿಯ ಶೇ. 97 ರಷ್ಟು ಮಂದಿಗೆ ಕೋವಿಡ್‌ ವಿರುದ್ದ ಪ್ರತಿಕಾಯ: ಸೆರೊ ಸಮೀಕ್ಷೆ

                ನವದೆಹಲಿ: ದೆಹಲಿಯ ಶೇಕಡ 97 ರಷ್ಟು ಜನರಲ್ಲಿ ಕೊರೊನಾ ವೈರಸ್‌ ಸೋಂಕು ವಿರುದ್ಧ ಪ್ರತಿಕಾಯ ಇದೆ, ಅಂದರೆ ಶೇಕಡ 97 ರಷ್ಟು ಜನರಲ್ಲಿ ಸೆರೊಪಾಸಿಟಿವಿ ಇದೆ ಎಂದು ಸೆರೊ ಸಮೀಕ್ಷೆ ಮೂಲಕ ತಿಳಿದು ಬಂದಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ಗುರುವಾರ ಹೇಳಿದ್ದಾರೆ.

                        ಹಾಗೆಯೇ ಎಲ್ಲಾ ಜಿಲ್ಲೆಗಳಲ್ಲಿ ಸೆರೊ ಪಾಸಿಟಿವಿಟಿ ಶೇಕಡ 95 ರಷ್ಟು ಇದೆ ಎಂದು ಸೆರೊ ಸರ್ವೇ ಮೂಲಕ ಕಂಡು ಬಂದಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ತಿಳಿಸಿದ್ದಾರೆ.

             ಈ ಸೆರೊ ಸರ್ವೇಗಾಗಿ ಸೆಪ್ಟೆಂಬರ್‌ನ ಕೊನೆಯ ವಾರದಲ್ಲಿ ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. ಒಟ್ಟು 28,000 ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. ಪ್ರತಿ ವಾರ್ಡ್‌ನಿಂದಲೂ 100 ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯು ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಈ ಸರ್ವೇಯನ್ನು ನಡೆಸಲಾಗಿದೆ. ಕೊರೊನಾ ವೈರಸ್‌ ಸೋಂಕಿನ ಸಂಖ್ಯೆ ಅಧಿಕ ಆಗುತ್ತಿರುವ ಕಾರಣದಿಂದಾಗಿ ಏಪ್ರಿಲ್‌ನಲ್ಲಿ ಈ ಸಮೀಕ್ಷೆಯನ್ನು ಮಧ್ಯದಲ್ಲಿಯೇ ಕೈಬಿಡಲಾಗಿತ್ತು.

                  ಈ ಸೆರೊ ಸರ್ವೇ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌, "ಮಹಿಳೆಯರಲ್ಲಿ ಸೆರೊ ಪಾಸಿಟಿವಿಟಿಯು ಪುರುಷರಿಗಿಂತ ಕೊಂಚ ಅಧಿಕವಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸೋಂಕು ಹರಡುವಿಕೆ ಪ್ರಮಾಣವು ಶೇಕಡ 88 ಆಗಿದೆ. ವಯಸ್ಕರಲ್ಲಿ ಸೋಂಕು ಹರಡುವಿಕೆ ಪ್ರಮಾಣವು ಶೇಕಡ 97 ರಿಂದ ಶೇಕಡ 98 ಆಗಿದೆ," ಎಂದು ವಿವರಿಸಿದ್ದಾರೆ.

              "ಇನ್ನು ಈ ಸೆರೊ ಸರ್ವೇಯನ್ನು ಕೋವಿಡ್‌ ಲಸಿಕೆ ಪಡೆದ ಹಾಗೂ ಕೋವಿಡ್‌ ಲಸಿಕೆಯನ್ನು ಪಡೆಯದ ಜನರನ್ನು ಜೊತೆಯಾಗಿ ಸೇರಿಸಿ ಮಾಡಲಾಗಿದೆ. ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆಯದವರಲ್ಲಿ ಶೇಕಡ 90 ರಷ್ಟು ಸೆರೋಪ್ರೆವೆಲೆನ್ಸ್ ಇದೆ. ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆದವರಲ್ಲಿ ಶೇಕಡ 97 ರಷ್ಟು ಮಂದಿಯಲ್ಲಿ ಸೆರೋಪ್ರೆವೆಲೆನ್ಸ್ ಇದೆ," ಎಂದು ಕೂಡಾ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ತಿಳಿಸಿದರು.

                                        ಶೇಕಡ 97 ರಷ್ಟು ಮಂದಿಯಲ್ಲಿ ಸೆರೊಪಾಸಿಟಿವಿಟಿ

         ದೆಹಲಿಯ ಬಹುತೇಕ ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಉಳಿದವರಿಗೆ ಲಸಿಕೆ ನೀಡಲಾಗಿದೆ. "ದೆಹಲಿಯಲ್ಲಿ ಸೆರೊ ಪಾಸಿಟಿವಿಟಿ ದರವು ನಿಧಾನವಾಗಿ ಅಧಿಕವಾಗಿದೆ ಎಂದು ಡೇಟಾದಲ್ಲಿ ಸ್ಪಷ್ಟವಾಗಿ ತಿಳಿದು ಬಂದಿದೆ. ಹರಡುವಿಕೆಯು 56 ಪ್ರತಿಶತದಷ್ಟು ಇದ್ದ ಹಿನ್ನೆಲೆ ಹಲವಾರು ಮಂದಿಯಲ್ಲಿ ಪ್ರತಿಕಾಯ ಇರಬಹುದು ಎಂದು ನಾವು ಭಾವಿಸಿದೆವು. ಈಗ ಅದು ಶೇಕಡ 97ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ," ಎಂದು ಹೇಳಿದರು.

                 ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆದ ಜನರ ಬಗ್ಗೆ ಮಾತನಾಡಿದ ಸತ್ಯೇಂದರ್‌ ಜೈನ್‌, "ಕೋವಿಡ್ ಲಸಿಕೆಯನ್ನು ಪಡೆಯದ ಹಾಗೂ ಲಸಿಕೆ ಪಡೆಯದ ಎರಡು ಭಾಗದ ಜನರಲ್ಲಿಯೂ ಸೋಂಕು ಹರಡುವಿಕೆ ಪ್ರಮಾಣ ಅಧಿಕವಾಗಿದೆ. ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆದವರಲ್ಲಿಯೇ ಅಧಿಕವಾಗಿ ಸೋಂಕು ಹರಡುವಿಕೆ ಪ್ರಮಾಣ ಇದೆ," ಎಂದರು.

             ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯ ಬಳಿಕ ಹಲವಾರು ರಾಜ್ಯಗಳಲ್ಲಿ ಸೆರೊ ಸರ್ವೇ ನಡೆಸಲಾಗಿದೆ. ಮುಂಬೈನಲ್ಲಿ ಈ ವರ್ಷದ ಆಗಸ್ಟ್‌ನಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ಮುಂಬೈನಲ್ಲಿ ಸೋಂಕು ಹರಡುವಿಕೆ ಪ್ರಮಾಣವು ಶೇಕಡ 86.64 ಆಗಿತ್ತು. ಜುಲೈನಲ್ಲಿ ಚಂಡೀಗಢದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡ 80.2 ರಷ್ಟು ಸೋಂಕು ಹರಡುವಿಕೆ ಪ್ರಮಾಣ ಹಾಗೂ ಸೆಪ್ಟೆಂಬರ್‌ನಲ್ಲಿ ಗುರುಗ್ರಾಮದಲ್ಲಿ ಶೇಕಡ 78.3 ರಷ್ಟು ಸೋಂಕು ಹರಡುವಿಕೆ ಪ್ರಮಾಣವಿದೆ ಎಂದು ತಿಳಿದು ಬಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries