ತ್ರಿಶೂರ್: ಪ್ರಧಾನ ಮಂತ್ರಿಯವರ ಕನಸು ನನಸಾಗುವ ಭಾಗವಾಗಿ ಕೇರಳದಿಂದ ಆಸ್ಟ್ರೇಲಿಯಾಗೆ ರಫ್ತು ಆರಂಭವಾಗಿದೆ. ಹಲಸಿನ ಹಣ್ಣು, ಪ್ಯಾಶನ್ ಫ್ರುಟ್ ಮತ್ತು ಜಾಯಿಕಾಯಿಗಳನ್ನೊಳಗೊಂಡ ಮೌಲ್ಯವರ್ಧಿತ ಉತ್ಪನ್ನಗಳ ಮೊದಲ ರಪ್ತಿಗೆ ಚಾಲನೆ ನೀಡಲಾಯಿತು. ರಫ್ತುಗಳನ್ನು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಸುಗಮಗೊಳಿಸುತ್ತದೆ.
ಹಲಸು, ಪ್ಯಾಶನ್ ಫ್ರೂಟ್ ಮತ್ತು ಜಾಯಿಕಾಯಿಗಳಿಂದ ವಿವಿಧ ಮೌಲ್ಯವರ್ಧಿತ ಮತ್ತು ಪೌಷ್ಟಿಕ ಉತ್ಪನ್ನಗಳನ್ನು ತ್ರಿಶೂರ್‍ನಲ್ಲಿ ರೈತರು ಉತ್ಪಾದಿಸುತ್ತಾರೆ, ಇದನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್‍ಗೆ ರಫ್ತು ಮಾಡಲಾಗುತ್ತದೆ. ಈ ಉತ್ಪನ್ನಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಹಾಳಾಗದಂತೆ ಮೌಲ್ಯವರ್ಧಿತಗೊಳಿಸಲಾಗಿದೆ.
2022 ರ ವೇಳೆಗೆ 400 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಗುರಿಯ ಭಾಗವಾಗಿ ಎಪಿಇಡಿಎ ಇಂತಹ ಉತ್ಪನ್ನಗಳ ರಫ್ತುಗಳನ್ನು ಉತ್ತೇಜಿಸುತ್ತಿದೆ.



