ಕಾಸರಗೋಡು: ಮುಳ್ಳೇರಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿ.ಎಚ್.ಎಸ್.ಇ. ವಿಭಾಗದಲ್ಲಿ ವಿವಿಧ ಶಿಕ್ಷಕರ ಹುದಸ್ದೆಗಳು ಬರಿದಾಗಿದ್ದು, ದಿನವೇತನ ಕ್ರಮದಲ್ಲಿ ನೇಮಕಾತಿ ನಡೆಸಲಾಗುವುದು. ನಾನ್ ವೊಕೇಶನಲ್ ಟೀಚರ್ ಕಾಮರ್ಸ್(ಎಂ.ಕಾಂ., ಬಿ.ಇಡಿ., ಸೆಟ್), ನಾನ್ ವೊಕೇಶನಲ್ ಟೀಚರ್ ಇ.ಡಿ.(ಎಂ.ಕಾಂ.ಬಿ.ಇಡಿ.ಸೆಟ್.), ವೊಕೇಶನಲ್ ಟೀಚರ್ ಅಕೌಂಟಿಂಗ್ ಆಂಡ್ ಟಾಕ್ಸೇಷನ್(ಎಂ.ಕಾಂ.), ವೊಕೇಶನಲ್ ಟೀಚರ್ ಮಾರ್ಕೆಟಿಂಗ್ ಆಂಡ್ ಸೇಲ್ಸ್ ಮಾನ್ ಶಿಪ್(ಎಂ.ಕಾಂ/ಎಂ.ಬಿ.ಎ.) ಎಂಬ ಹುದ್ದೆಗಳು ಬರಿದಾಗಿವೆ. ಆಸಕ್ತರು ತಮ್ಮ ಅಸಲಿ ಅರ್ಹತಾಪತ್ರಗಳ ಸಹಿತ ನ.3ರಂದು ಬೆಳಗ್ಗೆ 11 ಗಂಟೆಗೆ ವಿ.ಎಚ್.ಎಸ್.ಇ. ವಿಭಾಗದ ಕಚೇರಿಗೆ ಹಾಜರಾಗಬೇಕು.




