ಕಾಸರಗೋಡು: ನಿವೃತ್ತ ಶಿಕ್ಷಕರ ಸಾಧನೆ,ಅವರು ಸಾಗಿ ಬಂದ ಹಾದಿ ಹೊಸ ತಲೆಮಾರಿನ ಶಿಕ್ಷಕರಿಗೆ ದಾರಿದೀಪವಾಗುವುದರ ಜತೆಗೆ ಇತರ ಶಿಕ್ಷಕರಿಗೆ ಆದರ್ಶವಾಗಬೇಕು ಎಂದು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್ .ನಂದಿಕೇಶನ್ ತಿಳಿಸಿದ್ದಾರೆ.
ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ, ಸೇವೆಯಿಂದ ನಿವೃತ್ತರಾದ ಕಾಸರಗೋಡು , ಬೇಕಲ-ಹೊಸದುರ್ಗ ಉಪಜಿಲ್ಲೆಗಳ ಕನ್ನಡ ಮಾಧ್ಯಮ ಅಧ್ಯಾಪಕರಿಗೆ ನಡೆದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಉಪಜಿಲ್ಲಾ ಘಟಕ ಉಪಾಧ್ಯಕ್ಷ ಹರೀಶ.ಎನ್ ಎಡನೀರು ಅಧ್ಯಕ್ಷತೆ ವಹಿಸಿದ್ದರು.ಆಲಪ್ಪುಯ ಡಿಇಒ ಭಾರತೀ ಶೆಣೈ,ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲಾ ಅಧ್ಯಾಪಕರಾದ ವಿಶಾಲಾಕ್ಷ ಪುತ್ರಕಳ,ರಾಜೇಶ್ವರಿ.ಕೆ, ಕಲ್ಲಕಟ್ಟ ಶಾಲಾ ಮುಖ್ಯಶಿಕ್ಷಕ ಶ್ಯಾಮ ಪ್ರಸಾದ್,ಕೆ, ಶಿಕ್ಷಕ ಗಣಪತಿ ಭಟ್.ಎನ್, ಕಾಸರಗೋಡು ಜಿಯುಪಿ ಶಾಲಾ ಮುಖ್ಯ ಶಿಕ್ಷಕಿ ಲೀಲಾ, ಚಂದ್ರಗಿರಿ ಪ್ರೌಢಶಾಲಾ ಶಿಕ್ಷಕ ಸುಬ್ರಹ್ಮಣ್ಯ,ಹೊಸದುರ್ಗ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಅಮಿತಾ ಅವರನ್ನು ಶಾಲು ಹೊದಿಸಿ,ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ನಿವೃತ್ತ ಉಪಜಿಲ್ಲಾವಿದ್ಯಾಧಿಕಾರಿಗಳಾದ ಎಸ್.ವಿ.ಭಟ್,ಕೆ.ಪುಂಡರೀಕಾಕ್ಷ ಆಚಾರ್ಯ,ಅಧ್ಯಾಪಕರ ಸಂಘದ ಅಧ್ಯಕ್ಷರವೀಂದ್ರನಾಥ್‍ಬಲ್ಲಾಳ್,ಕೋಶಾಧಿಕಾರಿ ಪದ್ಮಾವತಿ.ಯಂ,ವೆಂಕಟಕೃಷ್ಣ ಎಡನೀರು ,ಹರಿಕೃಷ್ಣ ಭಟ್ ಉಪಸ್ಥಿತರಿದ್ದರು. ಗಂಗಾಕುಮಾರಿ ಪ್ರಾರ್ಥನೆ ಹಾಡಿದರು.ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ಬಾಬು.ಕೆ ಬಂದಡ್ಕ ಸ್ವಾಗತಿಸಿದರು. ಜತೆಕಾರ್ಯದರ್ಶಿ ವಿನೋದ್ ರಾಜ್ ಕಲ್ಲಕಟ್ಟ ವಂದಿಸಿದರು.




