ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ದೀರ್ಘ ಕಾಲದಿಂದ ಮುಚ್ಚಿಕೊಂಡಿದ್ದ ಚಿತ್ರಮಂದಿರಗಳು ಗುರುವಾರದಿಂದ ತೆರೆದು ಕಾರ್ಯಾಚರಿಸಲಾರಂಭಿಸಿದೆ. ಚಿತ್ರಮಂದಿರದ ಒಟ್ಟು ಆಸನಗಳ ಅರ್ಧದಷ್ಟು ಮಂದಿಗೆ ಮಾತ್ರ ಪ್ರವೇಶಿಸಲು ಅನುಮತಿ ನೀಡಲಾಗಿತ್ತು.
ಕಾಸರಗೋಡಿನಲ್ಲಿ ಬೆರಳೆಣಿಕೆಯ ಪ್ರೇಕ್ಷಕರು ಮಾತ್ರ ಚಿತ್ರಮಂದಿರದ ಕಡೆ ಮುಖ ಮಾಡಿದ್ದು, ಚಿತ್ರ ವೀಕ್ಷಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಪ್ರತಿಷ್ಠಿತ ಮೂವೀಮ್ಯಾಕ್ಸ್‍ನ 447 ಆಸನಗಳಿದ್ದು, ಇದರ ಶೇ. 25ರಷ್ಟು ಮಂದಿ ಪ್ರೇಕ್ಷಕರೂ ಆಗಮಿಸಿರಲಿಲ್ಲ. ಆರಂಭದ ದಿನಗಳಲ್ಲಿ ಚಿತ್ರವೀಕ್ಷಣೆಗೆ ಆಗಮಿಸುವವರ ಸಂಖ್ಯೆ ವಿರಳವಾಗಿದ್ದರೂ, ಕ್ರಮೇಣ ಈ ಸಂಖ್ಯೆ ಹೆಚ್ಚಾಗುವ ವಿಶ್ವಾಸವನ್ನು ಚಿತ್ರಮಂದಿರ ಮಾಲಿಕರು ವ್ಯಕ್ತಪಡಿಸಿದ್ದಾರೆ. ಶಿವಕಾರ್ತಿಕೇಯನ್ ನಟಿಸಿರುವ 'ಡಾಕ್ಟರ್'ಚಿತ್ರ ಮೂವೀಮ್ಯಾಕ್ಸ್‍ನಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ನ. 4ರಿಂದ ರಜನೀಕಾಂತ್ ಅವರ ಚಿತ್ರ ಪ್ರದರ್ಶನಗೊಳ್ಳಳಿರುವುದಾಗಿ ಆಡಳಿತ ಸಮಿತಿ ತಿಳಿಸಿದೆ.




