ಕಾಸರಗೋಡು: ನಗರದ ನೆಲ್ಲಿಕುಂಜೆ ಕಡಲತೀರದ ಶುಚೀಕರಣ ಜರುಗಿತು. ಆಝಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕ್ಲೀನ್ ಇಂಡಿಯಾ ಯೋಜನೆಯ ಸಲುವಾಗಿ ನೆಲ್ಲಿಕುಂಜೆ ಲೈಟ್ ಹೌಸ್ ಆವರಣದಲ್ಲಿ ಈ ಶುಚೀಕರಣ ನಡೆಯಿತು. ಕಾಸರಗೋಡು ನಗರಸಭೆ, ಕಾಸರಗೋಡು ಸರಕಾರಿ ಕಾಲೇಜಿನ ಎನ್.ಎಸ್.ಎಸ್. ಘಟಕದ ನೇತೃತ್ವದಲ್ಲಿ ಶುಚೀಕರಣ ಜರುಗಿತು. ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಷಂಸೀದಾ ಫಿರೋಝ್, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಖಾಲಿದ್ ಪೂಚಕ್ಕಾಡು, ಅಬ್ಬಾಸ್ ಬೀಗಂ, ಸದಸ್ಯರಾದ ಎಂ.ಉಮಾ, ಮುಷ್ತಾಕ್, ಕಾರ್ಯದರ್ಶಿ ಎಸ್.ಬಿಜು, ಜಿಲ್ಲಾ ಯೂತ್ ಅಧಿಕಾರಿ ಅಖಿಲ್ ಪಿ. ಉಪಸ್ಥಿತರಿದ್ದರು.




