ಮುಳ್ಳೇರಿಯ: ಕೊಡವಂಜಿ ಪುಲ್ಲಿ ಕರಿಂಗಾಳಿ ಭಗವತಿ ದೇವಸ್ಥಾನದಲ್ಲಿ ತುಲಾ ಪುತ್ಥರಿ ಉತ್ಸವದ ಅಂಗವಾಗಿ ಕಳಗಂನ ವಿವಿಧೆಡೆಯಿಂದ ಆಗಮಿಸಿದ್ದ ಪ್ರಮುಖರನ್ನು ಸನ್ಮಾನಿಸಲಾಯಿತು. ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಪ್ರಶಸ್ತಿ ಪಡೆದ ಮಹೇಶ್ ಕಾನತ್ತೂರು ಅವರನ್ನು ಸನ್ಮಾನಿಸಲಾಯಿತು. ಸೇವೆಯಿಂದ ನಿವೃತ್ತರಾದ ರಾಜನ್ ಪೇಯರ್ಪಳ್ಳ, ಚಂದ್ರಾವತಿ ಬೋವಿಕ್ಕಾನ ಮತ್ತು ವಿಶ್ವನ್ ನೆಕ್ರಂಪಾರೆ ಅವರಿಗೆ ದೇವಸ್ಥಾನದ ವತಿಯಿಂದ ಗೌರವ ಸಲ್ಲಿಸಲಾಯಿತು. ದೇವಸ್ಥಾನದ ಸ್ಥಳೀಯ ಕಾರ್ನವರ್ ಮುಖ್ಯ ಅತಿಥಿಗಳಾಗಿದ್ದರು. ದೇವಸ್ಥಾನದ ಅಧ್ಯಕ್ಷ ನಾರಾಯಣ ಶಿವಗಿರಿ ಅಧ್ಯಕ್ಷತೆ ವಹಿಸಿದ್ದರು. ಉಪೇಂದ್ರನ್ ಬೆಳ್ಚಪ್ಪಾಡ್, ಅಪ್ಪಕುಂಜಿ ವೆಳ್ಚÀಪ್ಪಾಡ್, ನಾರಾಯಣನ್ ನಾಣಂಬಯಲು, ಕುಂಞÂ್ಞಕಣ್ಣನ್ ಕೊಡವಂಚಿ, ಕುಂಞÂ್ಞಕಣ್ಣನ್ ವೈಶಾಖಂ, ಬಾಲಕೃಷ್ಣನ್ ಕುಣಿಯೇರಿ, ರಾಜು ಕೊಡವಂಚಿ, ಮಾತೃಸಮಿತಿ ಅಧ್ಯಕ್ಷೆ ರಜನಿ ಉಪಸ್ಥಿತರಿದ್ದರು. ಕಳಗಂ ಕಾರ್ಯದರ್ಶಿ ವಿಶ್ವನ್ ನೆಕ್ರಂಪಾರೆ ಸ್ವಾಗತಿಸಿ, ರಾಜನ್ ವಂದಿಸಿದರು.




