ತ್ರಿಶೂರ್: ಗುರುವಾಯೂರ್ ದೇವಸ್ಥಾನದಲ್ಲಿ ನಾಲಂಬಲ ದರ್ಶನ ಮತ್ತು ಪ್ರಸಾದ ಭೋಜನ ಆರಂಭಿಸಲು ದೇವಸ್ವಂ ಮಂಡಳಿ ನಿರ್ಧರಿಸಿದೆ. ಕೊರೋನಾ ನಿರ್ಬಂಧಗಳನ್ನು ಸಡಿಲಿಸಿರುವ ಹಿನ್ನೆಲೆಯಲ್ಲಿ ನವೆಂಬರ್ 1 ರಂದು (ವೃಶ್ಚಿಕ ರಾಶಿ) ನಡೆದ ಸಭೆಯಲ್ಲಿ ಭಕ್ತರಿಗೆ ನಾಲಂಬಲಂಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಕೊರೋನಾ ಪ್ರೊಟೋಕಾಲ್ ನ್ನು ಅನುಸರಿಸಿ ವರ್ಚುವಲ್ ಕ್ಯೂ ಮೂಲಕ ದೇವಾಲಯಕ್ಕೆ ಭೇಟಿ ನೀಡಲು ಅನುಮತಿಸಲಾಗುತ್ತದೆ.
ಅಸ್ತಿತ್ವದಲ್ಲಿರುವ ಆನ್‍ಲೈನ್ ಬುಕಿಂಗ್ ಮುಂದುವರಿಯುತ್ತದೆ. ಮುಂಗಡ ಕಾಯ್ದಿರಿಸಿದ ಭಕ್ತರು ನಿಗದಿತ ಸಮಯದಲ್ಲಿ ಮಾತ್ರ ದೇವಸ್ಥಾನ ಪ್ರವೇಶಿಸಬಹುದು. ಯಾವುದೇ ಕಾನೂನು ತೊಡಕುಗಳಿಲ್ಲದಿದ್ದರೆ, ತುಲಾಭಾರ ಸೇವೆ ಸೇರಿದಂತೆ ಎಲ್ಲಾ ಸೇವೆಗಳಿಗೆ ಮಕ್ಕಳು ಮತ್ತು ಇತರರಿಗೆ ಪೂರ್ಣ ಪ್ರಮಾಣದಲ್ಲಿ ಆಲಯ ಪ್ರವೇಶಿಸಿ ಪ್ರಾರ್ಥಿಸಲು ತೀರ್ಮಾನಿಸಲಾಗಿದೆ.
ದೇವಸ್ಥಾನದಲ್ಲಿ ನಡೆಯುವ ವಿವಾಹಗಳಿಗೆ ಮಂಟಪದಲ್ಲಿ ಹತ್ತು ಮಂದಿಗೆ ಹಾಗೂ ಮಂಟಪದ ಕೆಳಗೆ ಹತ್ತು ಮಂದಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ನಾಲ್ವರು ಛಾಯಾಗ್ರಾಹಕರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.




