ತಿರುವನಂತಪುರ: ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ನೀಡಿದ್ದ ಕಡಲೆ ಮಿಠಾಯಿ(ಕಟ್ಲೀಸ್) ಯಲ್ಲಿ ಮಾರಣಾಂತಿಕ ವಿಷಾಂಶ ಪತ್ತೆಯಾಗಿರುವ ಘಟನೆಯಲ್ಲಿ ಮಕ್ಕಳ ಹಕ್ಕು ಆಯೋಗ ಮಧ್ಯ ಪ್ರವೇಶಿಸಿದೆ. ಈ ಬಗ್ಗೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗಿದೆ. ಮಾಧ್ಯಮ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಅವರು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡರು. ಅಲ್ಲದೇ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು. 30ರೊಳಗೆ ವರದಿ ಸಲ್ಲಿಸುವಂತೆ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ.
ಕಡಲೆ ಮಿಠಾಯಿಯಲ್ಲಿ ಅಫೆÇ್ಲೀಟಾಕ್ಸಿನ್ ಬಿ1 ಎಂಬ ವಿಷವಿರುವುದು ಕಂಡುಬಂದಿದೆ. ವಿದ್ಯಾರ್ಥಿಗಳಿಗೆ ನೀಡಿದ್ದ ಮಿಠಾಯಿಯಲ್ಲಿ ಮಾರಣಾಂತಿಕ ವಿಷ ತಿರುವನಂತಪುರಂನಲ್ಲಿರುವ ಅನಾಲಿಟಿಕಲ್ ಲ್ಯಾಬ್‍ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಪತ್ತೆಯಾಗಿದೆ.
ಆಹಾರ ಭದ್ರತಾ ಭತ್ಯೆಯಡಿ ವಿತರಿಸಲಾದ ಆಹಾರ ಕಿಟ್‍ಗಳಲ್ಲಿ ಸಿಹಿತಿಂಡಿಗಳನ್ನು ನೀಡಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಮನವಿ ಮೇರೆಗೆ ಸಪ್ಲೈಕೋ ಇದುವರೆಗೆ 30 ಲಕ್ಷ ಮಕ್ಕಳಿಗೆ ಕಿಟ್ ವಿತರಿಸಿದೆ.




