ಕೊಚ್ಚಿ: ರಸ್ತೆ ಅಪಘಾತದಲ್ಲಿ ಮಿಸ್ ಕೇರಳ ಮತ್ತು ಮಿಸ್ ಕೇರಳ ರನ್ನರ್ ಅಪ್ ದುರ್ಮರಣಗೊಂಡ ಘಟನೆಯಲ್ಲಿ ಕಾರು ಚಾಲಕನನ್ನು ಪೋಲೀಸರು ಬಂಧಿಸಿದ್ದಾರೆ. ತ್ರಿಶೂರ್ ಮೂಲದ ಅಬ್ದುಲ್ ರೆಹಮಾನ್ ಬಂಧಿತ ಆರೋಪಿ. ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಅಪಘಾತದಲ್ಲಿ ಅಬ್ದುಲ್ ರೆಹಮಾನ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅಬ್ದುಲ್ ರೆಹಮಾನ್ ಬಂಧನವನ್ನು ದಾಖಲಿಸಲಾಗಿದೆ.
ಪಾಲರಿವಟ್ಟಂನ ಚಕ್ಕರಪ್ಪರಂ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನವೆಂಬರ್ 1 ರಂದು ಅಪಘಾತ ಸಂಭವಿಸಿತ್ತು. ಅಂದು ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದರು. ಮೃತರನ್ನು ಮಿಸ್ ಕೇರಳ ಪ್ರತಿಭೆ ಅಟ್ಟಿಂಗಲ್‍ನ ಅನ್ಸಿ ಕಬೀರ್ (25), ಮಿಸ್ ಕೇರಳ ರನ್ನರ್ ಅಫ್ ಅಜ್ನಾ ಶಾಜನ್ (24) ಮತ್ತು ತ್ರಿಶೂರ್‍ನ ಕೆಎ ಮೊಹಮ್ಮದ್ ಆಶಿಕ್ (25) ಎಂದು ಗುರುತಿಸಲಾಗಿದೆ. ಆಶಿಕ್ ಚಿಕಿತ್ಸೆ ಪಡೆಯುತ್ತಿದ್ದಾಗ ಅನ್ಸಿ ಮತ್ತು ಅಜ್ನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಡಿಕ್ಕಿಯಾಗುವುದನ್ನು ತಪ್ಪಿಸಲು ಬೈಕನ್ನು ಹಿಂದಿಕ್ಕಿ ತೆರಳುವಾಗ ಅಪಘಾತ ಸಂಭವಿಸಿತು. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ.




