ಕಾಸರಗೋಡು: ಮಾನವಹಕ್ಕುಗಳ ಪ್ರಾಧಾನ್ಯತೆ ಅರಿಯುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಸಾಮೂಹಿಕ ಚಿತ್ರ ರಚನಾ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಜರುಗಿತು. ಕುಟುಂಬಶ್ರೀ ಜಿಲ್ಲಾ ಮಿಶನ್ ನೇತೃತ್ವ ವಹಿಸುವ ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಗತ್ ರಣವೀರ್‍ಚಂದ್ ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಅಳವಡಿಸಲಾದ ಬೃಹತ್ ಕ್ಯಾನ್‍ವಾಸ್‍ನಲ್ಲಿ ಚಿತ್ರ ರಚಿಸುವ ಮೂಲಕ ಜಿಲ್ಲಾಧಿಕಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಐವತ್ತಕ್ಕೂ ಹೆಚ್ಚು ಮಂದಿ ಮಕ್ಕಳು ಮಾನವಹಕ್ಕುಗಳು ನಿನ್ನೆ ಮತ್ತು ಇಂದು ಎಂಬ ಧ್ಯೇಯದೊಂದಿಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾನವಹಕ್ಕುಗಳನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ರಚಿಸಿದರು. ತುಳಿತಕ್ಕೊಳಗಾದವರು, ಅವಕಾಶಕ್ಕಾಗಿ ನಡೆಯುವ ಹೋರಾಟ, ವಿದ್ಯಾಭ್ಯಾಸ, ಮಹಿಳಾ ಸುರಕ್ಷೆ, ವರದಕ್ಷಿಣೆ ಮಯಂತಾದುವುಗಳ ಬಗ್ಗೆ ಕ್ಯಾನ್‍ವಾಸಿನಲ್ಲಿ ಚಿತ್ರಗಳು ಮೂಡಿಬಂತು.
ಕುಟುಂಬಶ್ರೀ ಜಿಲ್ಲಾ ಕೋರ್ಡಿನೇಟರ್ ಟಿ.ಟಿ ಸುರೇಂದ್ರನ್, ಕುಟುಂಬಶ್ರೀ ಜಿಲ್ಲಾ ಮಿಶನ್ ಸಿಬ್ಬಂದಿ, ಚಿತ್ರಕಲಾವಿದ ಸಚೀಂದ್ರನ್ ಕಾರಡ್ಕ ಉಪಸ್ಥಿತರಿದ್ದರು. ಸಚೀಮದ್ರನ್ ಕಾರಡ್ಕ ಮಕ್ಕಳಿಗೆ ಚಿತ್ರ ರಚನೆಗೆ ಸಹಾಯ ಒದಗಿಸಿದರು.




