ನವದೆಹಲಿ: ಕಣ್ಣೂರಿನಿಂದ ಸೇವೆ ನಡೆಸಲು ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಬೇಕೆಂಬ ಕೇರಳದ ಬೇಡಿಕೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಎತಿಹಾದ್ ಮತ್ತು ಎಮಿರೇಟ್ಸ್‌ನಂತಹ ಕಂಪನಿಗಳಿಗೆ ಅವಕಾಶ ನೀಡುವುದರಿಂದ ಕಣ್ಣೂರಿನಿಂದ ಪ್ರಯಾಣ ದರ ಕಡಿಮೆಯಾಗಲಿದೆ ಎಂದು ಕೇರಳ ವಾದಿಸಿತ್ತು.
ಕಣ್ಣೂರಿನಿಂದ ಯುರೋಪ್ ಸೇರಿದಂತೆ ವಿದೇಶಗಳಿಗೆ ಸಂಪರ್ಕ ವಿಮಾನಗಳು ಇರುತ್ತವೆ ಎಂದು ಕೇರಳ ಹೇಳಿಕೊಂಡಿದೆ. ಆದರೆ ಈ ಪ್ರಸ್ತಾವನೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿಲ್ಲ. ಇದೇ ವೇಳೆ, ಭಾರತೀಯ ಕಂಪನಿಗಳ ಸೇವೆಗಳನ್ನು ಹೆಚ್ಚಿಸುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ

