HEALTH TIPS

ರಾಜ್ಯದಲ್ಲಿ ನಿನ್ನೆ 45,449 ಮಂದಿ ಜನರಿಗೆ ಕೊರೊನಾ ಪತ್ತೆ: ಎರ್ನಾಕುಳಂನಲ್ಲಿ 11,000 ಕ್ಕೂ ಹೆಚ್ಚು ಸೋಂಕಿತರು

                                             

             ತಿರುವನಂತಪುರ: ಕೇರಳದಲ್ಲಿ ನಿನ್ನೆ  45,449 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 11,091, ತಿರುವನಂತಪುರ 8980, ಕೋಝಿಕ್ಕೋಡ್ 5581, ತ್ರಿಶೂರ್ 2779, ಕೊಲ್ಲಂ 2667, ಮಲಪ್ಪುರಂ 2371, ಕೊಟ್ಟಾಯಂ 2216, ಪಾಲಕ್ಕಾಡ್ 2137, ಪತ್ತನಂತಿಟ್ಟ 1723, ಅಲಪ್ಪುಳ 1564, ಇಡುಕ್ಕಿ 1433, ಕಣ್ಣೂರು 1336, ವಯನಾಡ್ 941, ಕಾಸರಗೋಡು 630 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ. ನಿನ್ನೆ ಸಂಜೆಯ ವರೆಗಿನ  24 ಗಂಟೆಗಳಲ್ಲಿ 1,01,252 ಮಾದರಿಗಳನ್ನು ಪರೀಕ್ಷಿಸಲಾಗಿದೆ.

              ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,17,764 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 4,08,881 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 8,883 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 1,098 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 2,64,638 ಕೊರೋನಾ ಪ್ರಕರಣಗಳಲ್ಲಿ, ಕೇವಲ 3.5 ಪ್ರತಿಶತದಷ್ಟು ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

              ನಿನ್ನೆ ಸಂಜೆ ವರೆಗಿನ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 38 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 39 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 51,816ಕ್ಕೆ ಏರಿಕೆಯಾಗಿದೆ.

              ಒಟ್ಟು 27,961 ಮಂದಿ ಜನರು ರೋಗನಿರ್ಣಯಗೊಂಡು  ಚಿಕಿತ್ಸೆಪಡೆದು  ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 9017, ಕೊಲ್ಲಂ 577, ಪತ್ತನಂತಿಟ್ಟ 1146, ಆಲಪ್ಪುಳ 567, ಕೊಟ್ಟಾಯಂ 1225, ಇಡುಕ್ಕಿ 415, ಎರ್ನಾಕುಳಂ 2901, ತ್ರಿಶೂರ್ 5086, ಪಾಲಕ್ಕಾಡ್ 835, ಮಲಪ್ಪುರಂ 698, ಕೋಝಿಕ್ಕೋಡ್ 3229, ವಯನಾಡ್ 260, ಕಣ್ಣೂರು 1494, ಕಾಸರಗೋಡು 511 ಎಂಬಂತೆ ಗುಣಮುಖರಾಗಿದ್ದಾರೆ. 

             ಇದುವರೆಗೆ 2,64,638 ಮಂದಿ ಸೋಂಕು ಬಾಧಿಸಿ ಚಿಕಿತ್ಸೆಯಲ್ಲಿದ್ದಾರೆ. ಈ ವರೆಗೆ 53,25,932 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries