HEALTH TIPS

ಶೇ. 63 ರಷ್ಟು ಆರೋಗ್ಯ ಸಿಬ್ಬಂದಿಗೆ, ಶೇ. 58 ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್ ನೀಡಲಾಗಿದೆ: ಕೇಂದ್ರ

       ನವದೆಹಲಿ: ಸುಮಾರು ಶೇಕಡಾ 63 ರಷ್ಟು ಅರ್ಹ ಆರೋಗ್ಯ ಕಾರ್ಯಕರ್ತರು, ಶೇಕಡಾ 58 ರಷ್ಟು ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಶೇ.39 ರಷ್ಟು ಜನ ಕೋವಿಡ್-19 ಮುನ್ನೆಚ್ಚರಿಕೆ ಡೋಸ್(ಬೂಸ್ಟರ್ ಡೋಸ್) ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

      ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, 35 ಲಕ್ಷ ಆರೋಗ್ಯ ಕಾರ್ಯಕರ್ತರಲ್ಲಿ ಸುಮಾರು 22.66 ಲಕ್ಷ ಜನ ಬೂಸ್ಟರ್ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ ಎಂದರು.

         ಇನ್ನೂ 33 ಲಕ್ಷ ಮುಂಚೂಣಿ ಕಾರ್ಯಕರ್ತರ ಪೈಕಿ ಈಗಾಗಲೇ 191400 ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ. ಅದು ಶೇಕಡಾ 58 ರಷ್ಟಿದೆ ಎಂದು ಅವರು ಹೇಳಿದರು.

       "60 ವರ್ಷಕ್ಕಿಂತ ಮೇಲ್ಪಟ್ಟ ಅರ್ಹರ ಸಂಖ್ಯೆ 47,81,000 ಇದ್ದು, ಅವರಲ್ಲಿ 18,66,000 ಜನ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ. ಇದು ಶೇಕಡಾ 39 ರಷ್ಟಿದೆ" ಎಂದು ಭೂಷಣ್ ಅವರು ತಿಳಿಸಿದ್ದಾರೆ.

       "ನಾವು ಮುನ್ನೆಚ್ಚರಿಕೆ ಡೋಸ್ ನೀಡಲು ಆರಂಭಿಸಿದ ಕೇವಲ 10 ದಿನಗಳಲ್ಲಿ ಶೇ. 63 ರಷ್ಟು ಆರೋಗ್ಯ ಸಿಬ್ಬಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ. ಈ ಸಂಖ್ಯೆ ಹೆಚ್ಚಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ರಾಜ್ಯಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲರೂ ಬೂಸ್ಟರ್ ಡೋಸ್ ಪಡೆಯಲು ಜನರನ್ನು ಪ್ರೇರೇಪಿಸುವ ಅಗತ್ಯ ಇದೆ” ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries