HEALTH TIPS

ಸ್ವಾತಂತ್ರ್ಯಪೂರ್ವದಲ್ಲೇ ನಶಿಸಿದೆ ಎನ್ನಲಾಗಿದ್ದ ಚಿಟ್ಟೆ ಪ್ರಭೇದ ಮಧ್ಯಪ್ರದೇಶದಲ್ಲಿ ಪತ್ತೆ: ಭಾರತೀಯ ಪರಿಸರ ವಿಜ್ಞಾನಿಗಳ ಸಾಧನೆ

      ಭೂಪಾಲ್: ಸರ್ಸಿಸ್ ಬ್ಲೂ ತಳಿಯ ಚಿಟ್ಟೆ ಭೂಮಿ ಮೇಲಿಂದ ನಶಿಸಿ ಹೋಗಿದೆ ಎಂದೇ ನಂಬಲಾಗಿತ್ತು. ಆ ತಳಿಯ ಚಿಟ್ಟೆ ನಶಿಸಿದೆ ಎಂದು 80 ವರ್ಷಗಳ ಹಿಂದೆಯೇ ಅಂದರೆ 1941ರಲ್ಲಿ ಷರಾ ಬರೆಯಲಾಗಿತ್ತು. ಈಗ ಅದೇ ಚಿಟ್ಟೆಯನ್ನು ಮಧ್ಯಪ್ರದೇಶದಲ್ಲಿ ಸಂಶೋಧಕರು ಪತ್ತೆಹಚ್ಚಿದ್ದಾರೆ.
       ಶ್ರದ್ದಾ  ಕಪ್ರೆ ಮತ್ತು ಅರ್ಜುನ್ ಶುಕ್ಲಾ ಎಂಬಿಬ್ಬರು ಭಾರತೀಯ ವಿಜ್ಞಾನಿಗಳ ತಂಡ ಈ ಅಮೋಘ ಸಂಶೋಧನೆ ಮಾಡಿದೆ. ಮಧ್ಯಪ್ರದೇಶದ ಜಬಲ್ಪುರ ಸನಿಹ ಈ ಸರ್ಸಿಸ್ ಬ್ಲೂ ಚಿಟ್ಟೆ ಪ್ರಭೇದ ಪತ್ತೆಯಾಗಿದೆ.
       ಪತ್ತೆಯಾಗಿರುವ ಅತ್ಯಪರೂಪದ ಈ ತಳಿಯ ಚಿಟ್ಟೆಯನ್ನು ಸಂಶೋಧಕರ ತಂಡ ಜತನದಿಂದ ಸಂರಕ್ಷಿಸಿದೆ. ಇದನ್ನು ಅಮೆರಿಕದ ಫ್ಲಾರಿಡಾ ಮ್ಯೂಸಿಯಂಗೆ ಕಳಿಸಿಕೊಡಲಾಗುವುದು. ಅಲ್ಲಿ ಸಂರಕ್ಷಿಸಿಡಲಾಗಿರುವ ಸರ್ಸಿಸ್ ಬ್ಲೂ ಚಿಟ್ಟೆಗೂ ಭಾರತದಲ್ಲಿ ಪತ್ತೆಯಾಗಿರುವ ಅದೇ ತಳಿಯ ಚಿಟ್ಟೆಗೂ ಇರುವ ಸ್ವಾಮ್ಯತೆ ಕುರಿತು ಅಧ್ಯಯನ ನಡೆಯಲಿದೆ. 
       

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries