HEALTH TIPS

80 ರ ಇಳಿವಯಸ್ಸಿನಲ್ಲಿ ಮೊಮ್ಮಕಳಿಗಾಗಿ ಉಕ್ರೇನ್ ಸೇನೆ ಸೇರಲು ಮುಂದಾದ ವೃದ್ಧ! ಫೋಟೋ ವೈರಲ್

             ಕೀವ್:  ರಷ್ಯಾದ ಆಕ್ರಮಣದ ನಡುವೆ 80 ರ ಇಳಿ ವಯಸ್ಸಿನ ವ್ಯಕ್ತಿಯೊಬ್ಬರು ಉಕ್ರೇನ್ ಸೇನೆ ಸೇರಲು ಪ್ರಯತ್ನಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

           ಕೈಯಲ್ಲಿ ಬ್ಯಾಗ್ ವೊಂದನ್ನು ಹಿಡಿದ ವೃದ್ದರೊಬ್ಬರು ಉಕ್ರೇನ್ ಸೈನಿಕರೊಂದಿಗೆ ಮಾತನಾಡುತ್ತಿರುವ ಚಿತ್ರವೊಂದನ್ನು ಅಪರಿಚಿತ ಸ್ಥಳವೊಂದರಿಂದ ತೆಗೆಯಲಾಗಿದೆ.

             ಎರಡು ಟಿ- ಶರ್ಟ್ ಗಳು, ಒಂದು ಜೊತೆ ಹೆಚ್ಚುವರಿ ಪ್ಯಾಂಟ್ ಗಳು, ಟೂತ್ ಬ್ರಶ್ ಮತ್ತು ಊಟಕ್ಕಾಗಿ ಸ್ಯಾಂಡ್ ವಿಚ್ ಅನ್ನು ಅವರು ತೆಗೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ. 


              ವೃದ್ಧನ ದೇಶಾಭಿಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ನ ಮಾಜಿ ಅಧ್ಯಕ್ಷೆ ಕ್ಯಾಟರಿನಾ ಯುಶ್ಚೆಂಕೊ ಅವರು ಕೂಡಾ ಟ್ವಿಟರ್ ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries