ಕಾಸರಗೋಡು: ನಗರದ ಪ್ರೆಸ್‍ಕ್ಲಬ್ ಕಟ್ಟಡದ ನವೀಕರಣಕ್ಕಾಗಿ ಲೋಕೋಪಯೋಗಿ ಇಲಾಖೆ 85ಲಕ್ಷ ರೂ. ಮೊತ್ತದ ಕಾಮಗಾರಿಗೆ ಅನುಮತಿ ಮಂಜೂರುಗೊಳಿಸಿದೆ. ಕಳೆದ ವರ್ಷದ ಬಜೆಟ್‍ನಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕಾಸರಗೋಡು ಪ್ರೆಸ್‍ಕ್ಲಬ್ ಕಟ್ಟಡ ನವೀಕರಣಕ್ಕಾಗಿ ಮೊತ್ತ ಮೀಸಲಿರಿಸಿತ್ತು. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗಳು ನವೀಕರಣ ಕಾಮಗಾರಿಯ ಯೋಜನೆ ತಯಾರಿಸಿ ನೀಡಿದ್ದು, ಇಲಾಖೆ ಅತಿವೇಗದ ಅನುಮತಿ ಮಂಜೂರುಗೊಳಿಸಿದೆ.
ಕಾಸರಗೋಡು ಪ್ರೆಸ್ ಕ್ಲಬ್ ಬಹು ಅಂತಸ್ತಿನ ಕಟ್ಟಡ ಹೊಂದಲಿದ್ದು, ಇಲ್ಲಿ ಆಧುನಿಕ ರೀತಿಯ ಸುಸಜ್ಜಿತ ಕಚೇರಿ, ಪೀಠೋಪಕರಣಗಳೊಂದಿಗೆ ನವೀಕರಣ ಕಾಮಗಾರಿ ನಡೆಯಲಿದೆ. ಪ್ರೆಸ್‍ಕ್ಲಬ್ ಮನವಿಗೆ ಶೀಘ್ರ ಸ್ಪಂದಿಸಿ ಫಂಡ್ ಮಂಜೂರುಗೊಳಿಸಲು ಶ್ರಮಿಸಿದ ಸರ್ಕಾರ, ಇಲಾಖೆ ಸಚಿವ ಹಾಗೂ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರೆಸ್‍ಕ್ಲಬ್ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

