ಇಟಾನಗರ: ಅರುಣಾಚಲ ಪ್ರದೇಶದಿಂದ ಚೀನಾ ಸೇನೆಯು ಅಪಹರಿಸಿದ್ದ ಯುವಕ ಮತ್ತೆ ತನ್ನ ಕುಟುಂಬವನ್ನು ಸೇರಿದ್ದು, ಚೀನಾ ಸೇನೆ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಥಳಿಸಿ, ವಿದ್ಯುತ್ ಶಾಕ್ ನೀಡಿದ ಮಾಹಿತಿಯನ್ನು ಯುವಕನ ತಂದೆ ಬಹಿರಂಗಪಡಿಸಿದ್ದಾರೆ.
0
samarasasudhi
ಫೆಬ್ರವರಿ 01, 2022
ಇಟಾನಗರ: ಅರುಣಾಚಲ ಪ್ರದೇಶದಿಂದ ಚೀನಾ ಸೇನೆಯು ಅಪಹರಿಸಿದ್ದ ಯುವಕ ಮತ್ತೆ ತನ್ನ ಕುಟುಂಬವನ್ನು ಸೇರಿದ್ದು, ಚೀನಾ ಸೇನೆ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಥಳಿಸಿ, ವಿದ್ಯುತ್ ಶಾಕ್ ನೀಡಿದ ಮಾಹಿತಿಯನ್ನು ಯುವಕನ ತಂದೆ ಬಹಿರಂಗಪಡಿಸಿದ್ದಾರೆ.
ಜನವರಿ 18 ರಂದು ಮಿರಾಮ್ (17) ತನ್ನ ಸ್ನೇಹಿತ ಜಾನಿ ಯಾಯಿಂಗ್ ಜೊತೆ ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ ಬಳಿಯ ಲುಂಗ್ಟಾ ಜೋರ್ ಪ್ರದೇಶಕ್ಕೆ ಚಾರಣಕ್ಕೆ ತೆರಳಿದ್ದ ವೇಳೆ ಚೀನಾ ಸೇನೆಯು ಮಿರಾಮ್ ಅವರನ್ನು ಅಪಹರಿಸಿತ್ತು.