HEALTH TIPS

ಕೂದಲು ಸೂಪರ್ ಆಗಿ ಬೆಳೆಯಲು ತುಪ್ಪದಿಂದ ಹೇಗೆ ಆರೈಕೆ ಮಾಡಬೇಕು?

 ಭಾರತೀಯರು ಅಡುಗೆ ಮನೆಯಲ್ಲಿ ತುಪ್ಪ ಇದ್ದೇ ಇರುತ್ತದೆ. ಇದನ್ನು ಬಳಸಿದರೆ ಅಡುಗೆ ರುಚಿಯಾಗಿರುವುದು ಮಾತ್ರವಲ್ಲ ಇದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಲಾಗುವುದು. ತುಪ್ಪ ಹಚ್ಚಿ ಸ್ನಾನ ಮಾಡಿದರೆ ತ್ವಚೆಯ ಹೊಳಪು ಹೆಚ್ಚುವುದು. ಆದರೆ ತುಪ್ಪವನ್ನು ಕೂದಲಿನ ಆರೋಗ್ಯಕ್ಕೂ ಬಳಸಬಹುದು ಗೊತ್ತಾ? ತುಪ್ಪವನ್ನು ಕೂದಲಿಗೆ ಹಚ್ಚಿದರೆ ಕೂದಲು ದಟ್ಟವಾಗಿ ಬೆಳೆಯುವುದು ಮಾತ್ರವಲ್ಲ, ಹೊಳಪಿನಿಂದಲೂ ಕೂಡಿರುತ್ತದೆ.

ಕೂದಲಿನ ಆರೈಕೆಗೆ ತುಪ್ಪವನ್ನು ಬಳಸುವುದು ಹೇಗೆ, ಇದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ

ತುಪ್ಪ ಹೇಗೆ ಹಚ್ಚಬೇಕು?

ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಅಥವಾ ತುಪ್ಪವನ್ನು ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಡಿ, ನಂತರ ಹದ ಬಿಸಿ ನೀರಿನಿಂದ ತಲೆ ತೊಳೆಯಿರಿ, ತಲೆ ತೊಳೆಯುವಾಗ ಮೈಲ್ಡ್ ಶ್ಯಾಂಪೂ ಬಳಸಿ, ಅಲ್ಲದೆ ತುಪ್ಪ ಚೆನ್ನಾಗಿ ಹೋಗಲಿ, ಇಲ್ಲದಿದ್ದರೆ ತಲೆ ವಾಸನೆ ಬರುತ್ತದೆ. ಅಲ್ಲದೆ ಕೂದಲನ್ನು ತೊಳೆದ ಬಳಿಕ ಚೆನ್ನಾಗಿ ಒಣಗಿಸಬೇಕು. ತಲೆ ಕೂದಲು ಒಣಗಿಸಲು ಡ್ರೈಯರ್ ಬಳಸಬೇಡಿ, ರೂಂನ ಉಷ್ಣತೆಯಲ್ಲಿ ತಲೆಕೂದಲು ಒಣಗಿಸಿ.

ತಲೆ ಕೂದಲಿಗೆ ತುಪ್ಪವನ್ನು ಹಚ್ಚುವುದರಿಂದ ದೊರೆಯುವ ಪ್ರಯೋಜನಗಳು

1. ತಲೆ ಬುಡವನ್ನು ಮಾಯಿಶ್ಚರೈಸರ್ ಆಗಿ ಇಡುವುದು

ನಿಮ್ಮ ಕೂದಲು ತುಂಬಾ ಡ್ರೈಯಾಗುತ್ತಿದ್ದರೆ ತುಪ್ಪದಿಂದ ಆರೈಕೆ ಮಾಡುವುದು ಒಳ್ಳೆಯದು. ತುಪ್ಪದಲ್ಲಿರುವ ಕೊಬ್ಬಿನಂಶ ತಲೆ ಬುಡವನ್ನು ಮಾಯಿಶ್ಚರೈಸರ್ ಆಗಿಡುವುದು. ಅಲ್ಲದೆ ಕೂದಲಿನ ಬುಡವನ್ನು ಬಲವಾಗಿಸುತ್ತೆ.

2. ಕೂದಲಿನ ಹೊಳಪು ಹೆಚ್ಚಿಸುವುದು ತುಪ್ಪವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಹೊಳಪು ಹೆಚ್ಚುವುದು. ಕೂದಲು ಡ್ರೈಯಾಗಿ ಒರಟು-ಒರಟಾಗಿ ಕಾಣುತ್ತಿದ್ದರೆ ತುಪ್ಪದಿಂದ ಆರೈಕೆ ಮಾಡಿ, ಇದರಿಂದ ಕೂದಲಿನ ಹೊಳಪು ಹೆಚ್ಚುವುದು.

3. ಕೂದಲನ್ನು ಅತ್ಯುತ್ತಮವಾಗಿ ಕಂಡೀಷನಿಂಗ್‌ ಮಾಡುತ್ತೆ ತುಪ್ಪವನ್ನು ಡೀಪ್ ಕಂಡೀಷನಿಂಗ್‌ ಚಿಕಿತ್ಸೆಗೆ ಬಳಸಲಾಗುವುದು. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿ. ಇದರಿಂದ ತಲೆ ಬುಡದಲ್ಲಿ ರಕ್ತ ಸಂಚಾರ ಹೆಚ್ಚುವುದು,ಇದರಿಂದ ಕೂದಲಿನ ಆರೋಗ್ಯ ಹೆಚ್ಚುವುದು.

4. ಕೂದಲು ಉದುರುವುದನ್ನು ಕಡಿಮೆ ಮಾಡುತ್ತೆ ಕೂದಲಿನ ಆರೈಕೆಗೆ ತುಪ್ಪವನ್ನು ಬಳಸುವುದರಿಂದ ಅದರಲ್ಲಿ ವಿಮಿನ್ ಎ, ಡಿ ಇರುವುದರಿಂದ ವಾರಕ್ಕೊಮ್ಮೆ ತುಪ್ಪದಿಂದ ಆರೈಕೆ ಮಾಡಿದರೂ ಕೂದಲು ಉದುರುವುದು ಕಡಿಮೆಯಾಗಿ ಕೂದಲಿನ ಆರೋಗ್ಯ ಹೆಚ್ಚುವುದು. 

5. ಕೂದಲಿನ ತುದಿ ಕವಲೊಡೆಯುವುದನ್ನು ತಡೆಗಟ್ಟುತ್ತೆ ಕೂದಲಿನ ತುದಿ ಕವಲೊಡೆಯುತ್ತಿದ್ದರೆ ಕೂದಲು ಉದ್ದ ಬೆಳೆಯುವುದಿಲ್ಲ. ತುಪ್ಪದಿಂದ ಆರೈಕೆ ಮಾಡಿದರೆ ಕೂದಲಿನ ಬುಡ ಕವಲೊಡೆಯುವುದಿಲ್ಲ.





Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries