ಜಮ್ಮು: ಜಮ್ಮು ನಗರದ ತಾಪಮಾನ ಭಾನುವಾರ 37.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 76 ವರ್ಷಗಳ ಹಿಂದೆ ಮಾರ್ಚ್ ತಿಂಗಳಲ್ಲಿ ಕಂಡುಬಂದಿದ್ದ ಗರಿಷ್ಠ ತಾಪಮಾನದ ದಾಖಲೆಯನ್ನು ಮುರಿದಂತಾಗಿದೆ.
1945ರ ಮಾರ್ಚ್ 31ರಂದು ಗರಿಷ್ಠ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ನಿರ್ದೇಶಕ ಸೋನಮ್ ಲೋಟಸ್ ತಿಳಿಸಿದ್ದಾರೆ.




