ಕಾಸರಗೋಡು|: ಬಳಂತೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಕಾಞಂಗಾಡ್ ಎಎಲ್ ಎ ಮಂಜೂರು ಮಾಡಿದ ಶಾಲಾ ಬಸ್ ಗೆ ಶಾಸಕ ಇ.ಚಂದ್ರಶೇಖರನ್ ಧ್ವಜ ಪ್ರದರ್ಶಿಸಿ ಚಾಲನೆ ನೀಡಿ ಉದ್ಘಾಟಿಸಿದರು. ಶಾಲೆಯು 2019 - 21 ಎಸ್.ಪಿ.ಸಿ ಬ್ಯಾಚ್‍ನ ಪಾಸಿಂಗ್ ಔಟ್ ಪರೇಡ್ ನ್ನು ಸಹ ಆಯೋಜಿಸಲಾಗಿತ್ತು. ಪಾಸಿಂಗ್ ಔಟ್ ಪರೇಡ್ ನಲ್ಲಿ ಶಾಸಕ ಇ.ಚಂದ್ರಶೇಖರನ್ ಗೌರವ ವಂದನೆ ಸ್ವೀಕರಿಸಿದರು. ಶಾಸಕರ 2019-20ನೇ ಸಾಲಿನ ಆಸ್ತಿ ಅಭಿವೃದ್ಧಿ ನಿಧಿಯಿಂದ ಬಸ್ ಮಂಜೂರಾಗಿದೆ.
ಬಳಂತೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ ಪ್ರಸಾದ್ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷ ಪಿ.ಎಂ. ಕುರಿಯಕೋಸ್, ಪ್ರಾಚಾರ್ಯ ಗೋವಿಂದನ್ ಎಂ, ಸಿಪಿಒ ಸಿಂಧು ಮೋಲ್ ಅಜಕತ್, ಜಿಲ್ಲಾ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ, ಪರಪ್ಪ ಬ್ಲಾಕ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಕುಮಾರಿ ಎಂ, ಮುಖ್ಯಶಿಕ್ಷಕ ಕೆ ಸುರೇಶ್, ಪರಪ್ಪ ಬ್ಲಾಕ್ ಪಂಚಾಯಿತಿ ಸದಸ್ಯ ಅರುಣ್ ರಂಗತ್ ಮಾಳ ಉಪಸ್ಥಿತರಿದ್ದರು.




