HEALTH TIPS

ಕನ್ನಡ ಸಂತ ಬಿ.ಪುರುಷೋತ್ತಮ ಮಾಸ್ತರ್ ಅವರಿಗೆ ಅಭಿನಂದನೆ

          ಕುಂಬಳೆ:  ಸ್ವಾರ್ಥ, ವ್ಯಕ್ತಿ ಪ್ರತಿಷ್ಠೆಯನ್ನು ಬಿಟ್ಟು ವಸ್ತುನಿಷ್ಟವಾಗಿ ದುಡಿದು ಸಮಾಜದ ಏಳಿಗೆಗಾಗಿ ದುಡಿದ ವ್ಯಕ್ತಿ ಬಿ.ಪುರುಷೋತ್ತಮ ಮಾಸ್ತರ್. ಕನ್ನಡದ ಬಗೆಗೆ ಅವರಿಗಿರುವ ಕಾಳಜಿ, ಶ್ರದ್ಧೆ ಮುಂದಿನ ತಲೆಮಾರಿಗೆ ಸೂರ್ತಿದಾಯಕ ಎಂದು ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಹೇಳಿದರು. 

                    ಅವರು ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿ ನೀಡಿರುವ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತ ಕನ್ನಡ ಹೋರಾಟಗಾರ, ಶಿಕ್ಷಣ ತಜ್ಞ, ಕನ್ನಡ ಸಂತ ಬಿ.ಪುರುಷೋತ್ತಮ ಮಾಸ್ತರ್ ಅವರಿಗೆ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ವತಿಯಿಂದ ಅಭಿನಂದನೆ ನೀಡಿ ಗೌರವಿಸಿ ಮಾತನಾಡಿದರು. 

                ಸೇವಾ ಸಂಘದ ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟ್ರಮಣ, ಕೋಶಾಧಿಕಾರಿ ಸತೀಶ್ ಮಾಸ್ತರ್ ಕೂಡ್ಲು, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಕಾಂತಾವರ ಅಲ್ಲಮ ಪ್ರಭು ಪೀಠಾಧಿಪತಿ ಜಗನ್ನಾಥ ಪನಸಾಲೆ ಬೀದರ್, ನಿವೃತ್ತ ಅಧ್ಯಾಪಕಿ ಉಷಾ ಟೀಚರ್ ಪಾರೆಕಡವು, ಮಹಿಳಾ ಸಂಘದ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ ಅಣಂಗೂರು, ಅಧ್ಯಕ್ಷೆ ಉಷಾ ಕಿರಣ ಅಣಂಗೂರು ಮೊದಲಾದವರು ಅಭಿನಂದಿಸಿ ಮಾತನಾಡಿದರು. 

                   ಚಂದ್ರಗಿರಿ ಉಪಸಂಘದ ಅಧ್ಯಕ್ಷ ಸಿ.ಹರೀಶ್ಚಂದ್ರ, ಕೂಡ್ಲು ಉಪಸಂಘದ ಅಧ್ಯಕ್ಷ ಸತೀಶ್ ಕೂಡ್ಲು, ಪ್ರದೀಪ್ ಬೇಕಲ್,  ಮಹಿಳಾ ಸಂಘದ ಕಾರ್ಯದರ್ಶಿ ಸುಕನ್ಯಾ ಹರೀಶ್, ಭಾರತಿ ಮೊದಲಾದವರು ಉಪಸ್ಥಿತರಿದ್ದರು. ಪಾಂಡುರಂಗ ಸ್ವಾಗತಿಸಿ, ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries