ಬದಿಯಡ್ಕ: ಕುಂಟಿಕಾನ ಮಾಡತ್ತಡ್ಕ ಶ್ರೀದೈವಗಳ ಸೇವಾಸಮಿತಿ ಹಾಗೂ ಶ್ರೀ ಹರಿಹರ ಭಜನಾ ಮಂದಿರದ ವಾರ್ಷಿಕೋತ್ಸವ, ಶ್ರೀ ದೈವಗಳಿಗೆ ತಂಬಿಲ ಸೇವೆ ಬುಧವಾರ ಜರಗಿತು. ಬೆಳಗ್ಗೆ ಹಿರಿಯರಾದ ಗೋವಿಂದ ಭಟ್ ಮಿಂಚಿನಡ್ಕ ದೀಪ ಪ್ರಜ್ವಲನೆಗೈದು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಗಣಪತಿ ಹೋಮ, ಬ್ರಹ್ಮಶ್ರೀ ವೇದಮೂರ್ತಿ ಶಿವಶಂಕರ ಭಟ್ ಪಾಂಡೇಲು ಇವರ ನೇತೃತ್ವದಲ್ಲಿ ಶ್ರೀ ಶಂಕರನಾರಾಯಣ ಕಲ್ಪೋಕ್ತ ಪೂಜೆ, ಹರಿಹರ ಭಜನಾ ಸಂಘ ಮಾಡತ್ತಡ್ಕ ಇವರಿಂದ ಭಜನೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಿತು. ಭೋಜನ ಪ್ರಸಾದದ ನಂತರ ಸಂಜೆ ಶ್ರೀದೈವಗಳಿಗೆ ತಂಬಿಲ ಸೇವೆ ಜರಗಿತು. ಭಕ್ತಾದಿಗಳು ಪಾಲ್ಗೊಂಡು ಅರಸಿನ ಹುಡಿ ಪ್ರಸಾದ ಸ್ವೀಕರಿಸಿದರು.

.jpg)
