ಕಾಸರಗೋಡು: ಸಾಹಿತಿ ಲಕ್ಷ್ಮೀ ಕುಂಜತ್ತೂರು ಅವರ ಕುರಿತಾಗಿ ಡಾ. ಪ್ರಮಿಳಾ ಮಾಧವ್ ಬೆಂಗಳೂರು ರಚಿಸಿರುವ'ತೆರೆಮರೆ ಸಾಧಕಿ'ಹಾಗೂ ಇತರ ಕೃತಿಗಳ ಅನಾವರಣ ಸಮಾರಂಭ ಮಾ 26ರಂದು ಬೆಳಗ್ಗೆ 10ಕ್ಕೆ ಕುಂಜತ್ತೂರು 'ವೈಶಾಲಿ'ಯಲ್ಲಿ ಜರುಗಲಿದೆ. ಸಾಹಿತಿ, ಸಂಶೋಧಕ ಡಾ. ಪಿ.ಶ್ರೀಕೃಷ್ಣ ಭಟ್ ಕೃತಿಗಳ ಅನಾವರಣಗೊಳಿಸುವರು. ಡಾ. ರಾಧಾಕೃಷ್ಣ ಬೆಳ್ಳೂರು ಸಮಾರಂಭ ಉದ್ಘಾಟಿಸುವರು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸುವರು.

