HEALTH TIPS

ಗಾಂಧಿ ಸ್ಮೃತಿ ಮಂಟಪ ಪುನರ್ ನಿರ್ಮಾಣ:ಶಂಕುಸ್ಥಾಪನೆ

                 ನೀಲೇಶ್ವರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆಯನ್ನು ನೀಲೇಶ್ವರದಲ್ಲಿ ನವೀಕರಿಸಲಾಗುತ್ತಿದೆ. 

               ಪುನರ್ ನಿರ್ಮಾಣಗೊಳ್ಳಲಿರುವ ಗಾಂಧಿ ಸ್ಮೃತಿ ಮಂಟಪದ ಶಂಕುಸ್ಥಾಪನೆಯನ್ನು ನಿನ್ನೆ ಶಾಸಕ ಎಂ. ರಾಜಗೋಪಾಲನ್ ನಿರ್ವಹಿಸಿದರು. ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ.  ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ರವೀಂದ್ರನ್ ಮತ್ತು ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ಸುಭಾಷ್ ಹಾಗೂ ಪುರಸಭಾ ಸದಸ್ಯರಾದ ಪಿ.ಎಸ್. ಭಾರ್ಗವಿ, ಪಿ.ಬಿಂದು, ವಿನು ನಿಲವ್ ಮಾತನಾಡಿದರು. ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ ಸ್ವಾಗತಿಸಿ, ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ಗೌರಿ ವಂದಿಸಿದರು. 

    ಗಾಂಧಿಯವರ ಸ್ವಂತ ಕೈಬರಹದಲ್ಲಿರುವ ಸಂದೇಶವನ್ನು ಮಹಾತ್ಮ ಗಾಂಧಿಯವರ ಸ್ಮಾರಕವಾಗಿ ನೀಲೇಶ್ವರ ರಾಜಾಸ್ ಶಾಲೆಯಲ್ಲಿ ಇರಿಸಲಾಗಿದೆ. ಸ್ಮೃತಿ ಮಂಟಪವು ಗಾಂಧೀಜಿಯವರ ಸ್ಮರಣೆಯನ್ನು ಪ್ರತಿಧ್ವನಿಸುವ ನಗರದ ಮತ್ತೊಂದು ಸ್ಥಳವಾಗಿದೆ. ಈಗಿರುವ ಸ್ಮಾರಕ ಭವನವನ್ನು ಸುಂದರವಾಗಿ ಮರುನಿರ್ಮಾಣ ಮಾಡುತ್ತಿರುವುದರಿಂದ  ಹೆಚ್ಚು ಗಮನಾರ್ಹ ಸಾಂಸ್ಕøತಿಕ ತಾಣವಾಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries