HEALTH TIPS

ಆರ್ಕಿಟೆಕ್ಚರ್‌ ಕೋರ್ಸ್‌ ಪ್ರವೇಶ: ಪಿಸಿಎಂ ಕಡ್ಡಾಯವಲ್ಲ

              ನವದೆಹಲಿ: ಆರ್ಕಿಟೆಕ್ಚರ್‌ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಇನ್ನು ಮುಂದೆ 12ನೇ ತರಗತಿ ಅಥವಾ ದ್ವಿತೀಯ ಪಿಯುನಲ್ಲಿ ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತ (ಪಿಸಿಎಂ) ವಿಷಯಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಅಧ್ಯಯನ ಮಾಡಿರಲೇಬೇಕು ಎಂದೇನಿಲ್ಲ.

            ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ (ಎಐಸಿಟಿಇ) ಮಂಗಳವಾರ ಬಿಡುಗಡೆ ಮಾಡಿರುವ 2022-23ರ ಅನುಮೋದನೆ ಕೈಪಿಡಿಯಲ್ಲಿ ತಿಳಿಸಲಾಗಿದೆ.

           ಜತಗೆ 'ಫ್ಯಾಷನ್ ತಂತ್ರಜ್ಞಾನ' ಮತ್ತು 'ಪ್ಯಾಕೇಜಿಂಗ್ ತಂತ್ರಜ್ಞಾನ' ಕೋರ್ಸ್‌ಗಳ ಪ್ರವೇಶಕ್ಕೂ 12ನೇ ತರಗತಿಯಲ್ಲಿ ಕಡ್ಡಾಯವಾಗಿ ಪಿಸಿಎಂ ವಿಷಯಗಳನ್ನು ಓದಿರಲೇಬೇಕು ಎಂದೇನಿಲ್ಲ ಎಂದೂ ಕೈಪಿಡಿಯಲ್ಲಿ ಹೇಳಲಾಗಿದೆ.

             12ನೇ ತರಗತಿಯಲ್ಲಿ ಪಿಸಿಎಂ ಅಧ್ಯಯನ ಮಾಡದ ವಿದ್ಯಾರ್ಥಿಗಳೂ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕುರಿತ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ ಎಂದು ತಾಂತ್ರಿಕ ಶಿಕ್ಷಣ ನಿಯಂತ್ರಕ ಸಂಸ್ಥೆ ಕಳೆದ ವರ್ಷ ಘೋಷಿಸಿತ್ತು.

           'ಯಾವ ಕೋರ್ಸ್‌ಗಳಿಗೆ ಪಿಸಿಎಂ ಅನ್ನು ಐಚ್ಛಿಕವಾಗಿ ಮಾಡಬಹುದು ಎಂಬುದರ ಕುರಿತು ಶಿಫಾರಸುಗಳನ್ನು ಮಾಡಲು ನಾವು ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮೂರು ಕೋರ್ಸ್‌ಗಳನ್ನು ಆಯ್ಕೆ ಮಾಡಲಾಗಿದೆ' ಎಂದು ಎಐಸಿಟಿಇ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಪಿಸಿಎಂ ಜತೆಗೆ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೀವ ವಿಜ್ಞಾನ, ಇನ್ಫರ್ಮ್ಯಾಟಿಕ್ಸ್ ಪ್ರಾಕ್ಟೀಸಸ್‌, ಜೈವಿಕ ತಂತ್ರಜ್ಞಾನ, ತಾಂತ್ರಿಕ ವೃತ್ತಿಪರ ವಿಷಯ, ಕೃಷಿ, ಎಂಜಿನಿಯರಿಂಗ್ ಗ್ರಾಫಿಕ್ಸ್, ವ್ಯವಹಾರ ಅಧ್ಯಯನ, ಉದ್ಯಮಶೀಲತೆ ವಿಷಯಗಳನ್ನು ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಈ ಮೂರು ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹವಾಗಿರುತ್ತಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries