HEALTH TIPS

'ಭಾರತ ಬಡ ಹಾಗೂ ಅಸಮಾನತೆಯ ದೇಶ': ಅಂತಾರಾಷ್ಟ್ರೀಯ ವರದಿಗೆ ನಿರ್ಮಲಾ ಸೀತಾರಾಮನ್ ಖಂಡನೆ‌

              ಭಾರತವು ''ಬಡ ಹಾಗೂ ಅತ್ಯಂತ ಅಸಮಾನತೆಯಿರುವ ದೇಶ'' ಎಂಬ ಜಾಗತಿಕ ಅಸಮಾನತೆ ಕುರಿತ ಅಂತಾರಾಷ್ಟ್ರೀಯ ಸಂಘಟನೆಯ ವರದಿ ಬಣ್ಣಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಖಂಡಿಸಿದ್ದಾರೆ. '' ಈ ವರದಿಯು ಲೋಪಭರಿತ ಹಾಗೂ ಪ್ರಶ್ನಾರ್ಹವಾದ ವಿಧಾನಶಾಸ್ತ್ರಗಳನ್ನು ಆಧರಿಸಿದೆ '' ಅವರು ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.

           ಹಿಂದಿನ ಯುಪಿಎ ಸರಕಾರವು ಹಲವಾರು ಸುಸ್ತಿದಾರರಿಂದ ಸಾಲದ ಹಣವನ್ನು ವಸೂಲು ಮಾಡದೆ ಅವರ ಖಾತೆಗಳನ್ನು ನಿಷ್ಕ್ರಿಯ ಆಸ್ತಿ (ಎನ್ಪಿಎ)ಗಳಾಗಿ ಪರಿವರ್ತಿಸಲಾಗಿತ್ತೆಂದು ನಿರ್ಮಲಾ ಸೀತಾರಾಮನ್ ದೂರಿದ್ದಾರೆ. ಸಾಲ ಸುಸ್ತಿದಾರರು ಹಾಗೂ ಎನ್ಪಿಎ ವಿರುದ್ಧ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಡಿಎಂಕೆ ಸಂಸದ ಬಾಲು ಟಿ.ಆರ್. ಬಾಲು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ, ಸುಸ್ತಿದಾರರಿಂದ ಬಾಕಿಯಿರುವ ಸಾಲದ ಹಣವನ್ನು ಮರುವಸೂಲಿ ಮಾಡಲು ಬ್ಯಾಂಕ್‌ಗಳು ಸೂಕ್ತ ಕ್ರಮಗಳನ್ನು ಕೈಗೊಂಡಿವೆ ಎಂದರು.

               ವರ್ಲ್ಡ್ ಇನ್‌ಇಕ್ವಾಲಿಟಿ ಲ್ಯಾಬ್ (ವಿಶ್ವ ಅಸಮಾನತೆಯ ಪ್ರಯೋಗಾಲಯ)ಸಂಸ್ಥೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಿದ ಈವರದಿಯಲ್ಲಿ ಭಾರತವನ್ನು ಬಡ ಹಾಗೂ ಅತ್ಯಂತ ಸಮಾನ ದೇಶವೆಂದು ಪರಿಗಣಿಸಲಾಗಿದೆ. 2021ರಲ್ಲಿ ಭಾರತದ ಜನಸಂಖ್ಯೆಯ ಉನ್ನತ ಮಟ್ಟದಲ್ಲಿರುವ ಶೇ.1ರಷ್ಟು ಜನಸಂಖ್ಯೆಯು ಒಟ್ಟು ರಾಷ್ಟ್ರೀಯ ಆದಾಯದ ಐದನೇ ಒಂದಂಶವನ್ನು ತಮ್ಮ ಸ್ವಾಧೀನದಲ್ಲಿರಿಸಿತ್ತೆಂದು ವರದಿ ಹೇಳಿದೆ.
             ವಲ್ಡ್ ಇನ್‌ಇಕ್ವಾಲಿಟಿ ಲ್ಯಾಬ್ ನ ಸಹ ನಿರ್ದೇಸ ಲ್ಯೂಕಾಸ್ ಚಾನ್ಸೆಲ್ ಈ ವರದಿಯನ್ನು ರಚಿಸಿದ್ದರು. ಫ್ರೆಂಚ್ ಅರ್ಥಶಾಸ್ತ್ರಜ್ಞ ಥೋಮಸ್ ಪಿಕೆಟ್ಟಿ ಸೇರಿದಂತೆ ಹಲವರು ತಜ್ಞರು ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದ್ದರು.
              ಭಾರತದ ವಯಸ್ಕ ಜನಸಂಖ್ಯೆಯ ಸರಾಸರಿ ರಾಷ್ಟ್ರೀಯ ಆದಾಯವು 2,04,200 ರೂ. ಆಗಿದೆ. ತಳಮಟ್ಟದಲ್ಲಿರುವ ಶೇ.50ರಷ್ಟು ವಾರ್ಷಿಕವಾಗಿ 53,610 ರೂ. ಸಂಪಾದಿಸುತ್ತಾರೆ ಹಾಗೂ ಉನ್ನತ ಮಟ್ಟದಲ್ಲಿರುವ ಶೇ.10ರಷ್ಟು ಮಂದಿ ಇದಕ್ಕಿಂತ ಇಪ್ಪತ್ತು ಪಟ್ಟು ಅಧಿಕ ಅಂದರೆ 11,66,520 ರೂ. ಆದಾಯವನ್ನು ಸಂಪಾದಿಸುತ್ತಿವೆ ಎಂದು ವರದಿ ಹೇಳಿತ್ತು.
               ಕೋವಿಡ್19 ಸಾಂಕ್ರಾಮಿಕವು ಅತ್ಯಂತ ಶ್ರೀಮಂತ ಹಾಗೂರು ಹಾಗೂ ಉಳಿದ ಜನಸಂಖ್ಯೆಯ ನಡುವಿನ ಆರ್ಥಿಕ ಅಸಮಾನತೆಯನ್ನು ಉಲ್ಬಣಗೊಳಿಸಿದೆ ಎಂದು ವರದಿಯ ಅಗ್ರಲೇಖಕರಾದ ಲೂಕಾಸ್ ಚಾನ್ಸೆಲ್ ಹೇಳಿದ್ದಾರೆ.
              ಸಾಲ ಸುಸ್ತಿದಾರರ ಆಸ್ತಿಗಳ ಜಪ್ತಿಯ ಮೂಲಕ ಸಾರ್ವಜನಿಕರಿಂದ ಬ್ಯಾಂಕುಗಳು 19 ಸಾವಿರ ಕೋಟಿ ರೂ.ಗೂ ಅದಿಕ ಹಣವನ್ನು ವಸೂಲಿ ಮಾಡಿವೆ. ಆದರೆ ಯಪಿಎ ಸರಕಾರದ ಆಡಳಿತದಲ್ಲಿ ಎನ್ಪಿಎಗಳಿಂದ ಯಾವುದೇ ಹಣವನ್ನು ವಸೂಲಿ ಮಾಡಲಾಗಿಲ್ಲವೆಂದವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries