ಮುಳ್ಳೇರಿಯ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಮಾಹಿತಿ ಕಛೇರಿಯು ಕಾರಡ್ಕ ಬ್ಲಾಕ್ ಪಂಚಾಯತ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಸಂಭ್ರಮಾಚರಣೆ ಇಂದು ನಡೆಯಲಿದ್ದು, ಪೂರ್ವಭಾವಿ ಪ್ರಚಾರ ಮೆರವಣಿಗೆಯನ್ನು ಮುಳ್ಳೇರಿಯ ಪೇಟೆಯಲ್ಲಿ ಬುಧವಾರ ಆಯೋಜಿಸಿತ್ತು. ಮುಳ್ಳೇರಿಯ ಸಹಕಾರಿ ಆಸ್ಪತ್ರೆ ಆವರಣದಿಂದ ಆರಂಭವಾದ ಮೆರವಣಿಗೆ ನಗರ ಪ್ರದಕ್ಷಿಣೆಯಾಗಿ ಕಾರಡ್ಕ ಪಂಚಾಯತ್ ಕಚೇರಿ ಎದುರು ಸಮಾಪನಗೊಂಡಿತು.
ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ.ನಾರಾಯಣನ್, ಸ್ಮಿತಾ ಪ್ರಿಯರಂಜನ್, ಪಿ.ಸವಿತಾ, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ನಾಸರ್, ಎಂ.ರತ್ನಾಕರ, ಪಂಚಾಯಿತಿ ಸದಸ್ಯರಾದ ಎಂ. ತಂಬಾನ್, ಎ. ಪ್ರಸೀಜ, ಸಿ.ಎನ್.ಸಂತೋಷ್, ಎಸ್.ಆರ್.ಸತ್ಯವತಿ, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ರಾಜಕೀಯ ಪಕ್ಷದ ಮುಖಂಡರಾದ ಕೆ.ಶಂಕರ, ವಸಂತ, ವಾರಿಜಾಕ್ಷ, ಎಂ.ಕೃಷ್ಣ, ಎ. ವಿಜಯಕುಮಾರ್, ಜಯನ್ ಎನ್‍ಎಸ್‍ಎಸ್ ಸ್ವಯಂಸೇವಕರು, ಜೂನಿಯರ್ ರೆಡ್‍ಕ್ರಾಸ್ ಸ್ವಯಂಸೇವಕರು, ಸ್ಕೌಟ್ ಮತ್ತು ಗೈಡ್ ಕಾರ್ಯಕರ್ತರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಮತ್ತು ಸ್ವಯಂಸೇವಕರು ನೇತೃತ್ವ ವಹಿಸಿದ್ದರು.
ಇಂದು ಸಂಜೆ ಕಾರ್ಯಕ್ರಮ:
ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ವಾರ್ತಾ ಕಚೇರಿ ವತಿಯಿಂದ ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯ ಸಹಯೋಗದಲ್ಲಿ ಇಂದು ಬುಧವಾರ ಆಜಾದಿಕ ಅಮೃತ ಮಹೋತ್ಸವ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಸಂಜೆ 5 ಕ್ಕೆ ಕಾರಡ್ಕ ಸತ್ಯಾಗ್ರಹ ಹೋರಾಟಗಾರರ ಸ್ಮøತಿಯೊಂದಿಗೆ ಕಾರಡ್ಕ ಬ್ಲಾ.ಪಂ.ಸಭಾಂಗಣದಲ್ಲಿ ರಾಜ್ಯ ಸಂಸ್ಕøತಿ, ಬಂದರು ವಸ್ತುಸಂಗ್ರಹಾಲಯ ಖಾತೆ ಸಚಿವ ಅಹ್ಮದ್ ದೇವರ ಕೋವಿಲ್ ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಅಶ್ರಫ್, ಎನ್‍ಎ ನೆಲ್ಲಿಕುನ್ನು, ಸಿಎಚ್ ಕುಂಞಂಬು, ಇ ಚಂದ್ರಶೇಖರನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆಎಂಕೆ ನಂಬಿಯಾರ್ ಆಗಮಿಸಲಿದ್ದಾರೆ. ಖ್ಯಾತ ಸಾಹಿತಿ ಕರಿವೆಳ್ಳೂರು ಮುರಳಿ ಸಾಂಸ್ಕøತಿಕ ಉಪನ್ಯಾಸ ನೀಡಲಿದ್ದಾರೆ.
ಕಾರಡ್ಕ ಅರಣ್ಯ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಸಂಗೀತ ಪ್ರದರ್ಶನ ನಡೆಯಲಿದೆ. ವಜ್ರಮಹೋತ್ಸವ ಫೆಲೋಶಿಪ್ ಪಡೆದ ಕಲಾವಿದರಿಂದ ಜಾನಪದ ಸಂಗೀತ ಕಾರ್ಯಕ್ರಮ ಹಾಗೂ ಇತಿಹಾಸ ಛಾಯಾಚಿತ್ರ ಪ್ರದರ್ಶನವೂ ನಡೆಯಲಿದೆ.




