ತಿರುವನಂತಪುರ: ಎರಡು ದಿನಗಳ ರಾಷ್ಟ್ರೀಯ ಮುಷ್ಕರದ ಮೊದಲ ದಿನವೇ ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರ ನಡೆದು ಅಚ್ಚರಿ ಮೂಡಿಸಿದೆ. ಮುಷ್ಕರ ನಿರತರು ಖಾಸಗಿ ವಾಹನಗಳ ಗಾಜುಗಳನ್ನು ಒಡೆದು, ಕೆಲಸದಲ್ಲಿದ್ದ ನೌಕರರಿಗೆ ಬೆದರಿಕೆ ಹಾಕಿದರು. ಇತರೆ ರಾಜ್ಯಗಳಲ್ಲಿ ಜನಜೀವನ ಎಂದಿನಂತೆ ಸಾಗುತ್ತಿರುವ ಮಧ್ಯೆ ಕೇರಳದಲ್ಲಿ ಮಾತ್ರ ಮುಷ್ಕರದ ಮರೆಯಲ್ಲಿ ವ್ಯಾಪಕ ಅಕ್ರಮಗಳು ವರದಿಯಾಗಿರುವುದು ಖೇದಕರವಾಗಿದೆ.
ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯವು ಬಹುತೇಕ ಸ್ತಬ್ಧಗೊಂಡಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಅಂಗಡಿಗಳು ತೆರೆದಿದ್ದವು ಮತ್ತು ಖಾಸಗಿ ವಾಹನಗಳು ರಸ್ತೆಗಿಳಿದಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ಪ್ರತಿಭಟನಾಕಾರರು ತತ್ತರಿಸಿದರು. ನಂತರ ವಿವಿಧೆಡೆ ಜಮಾಯಿಸಿದ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದರು. ಕೆಲಸಕ್ಕೆ ಬಂದ ನೌಕರರನ್ನು ಬೆದರಿಸಿ ವಾಪಸ್ ಕಳುಹಿಸಿದ್ದಾರೆ. ಖಾಸಗಿ ವಾಹನಗಳ ಮೇಲೆ ದಾಳಿ ನಡೆಸಲಾಗಿದೆ.
ತಿರುವನಂತಪುರದಲ್ಲಿ ಪ್ರತಿಭಟನಾಕಾರರು ಖಾಸಗಿ ವಾಹನಗಳನ್ನು ತಡೆದರು. ಕೇಂದ್ರ ಸರ್ಕಾರದ ವಿರುದ್ಧ ಜನರಿಗಾಗಿ ಹೋರಾಟ ನಡೆಸುತ್ತಿದ್ದು, ಯಾರೂ ಬೀದಿಗಿಳಿಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಕೆಲಸಕ್ಕೆ ಬಂದವರು ಹಾಗೂ ಅಸ್ವಸ್ಥರನ್ನು ಬೆದರಿಸಿ ವಾಪಸ್ ಕಳುಹಿಸಿದ್ದಾರೆ. ಪೆಟ್ಟಾದಲ್ಲಿ ನ್ಯಾಯಾಲಯಕ್ಕೆ ತೆರಳಿದ್ದ ಮ್ಯಾಜಿಸ್ಟ್ರೇಟ್ ವಾಹನವನ್ನು ಪ್ರತಿಭಟನಾಕಾರರು ತಡೆದರು. ನಂತರ ಮ್ಯಾಜಿಸ್ಟ್ರೇಟ್ ಈ ಬಗ್ಗೆ ಪೋಲೀಸರಿಂದ ವಿವರಣೆ ಕೇಳಿದರು. ಕಾಟ್ಟಾಕಡದಲ್ಲಿ ಪ್ರತಿಭಟನಾಕಾರರು ರಸ್ತೆಯಲ್ಲಿ ಕುರ್ಚಿಗಳನ್ನು ಹಾಕಿಕೊಂಡು ಸಂಚಾರಕ್ಕೆ ಅಡ್ಡಿಪಡಿಸಿದರು.
ಮೊದಲ ದಿನ ಎರ್ನಾಕುಳಂ ಜಿಲ್ಲೆ ಕೂಡ ಸಂಪೂರ್ಣ ಸ್ಥಬ್ದಗೊಂಡಿತ್ತು. ಕೆಲವು ಅಂಗಡಿಗಳು ಬೆಳಿಗ್ಗೆ ತೆರೆದಿದ್ದರೂ ನಂತರ ಪ್ರತಿಭಟನಾಕಾರರ ಭಯದಿಂದ ವ್ಯಾಪಾರಿಗಳು ಮುಚ್ಚಿದರು. ಬಿಪಿಸಿಎಲ್ ನಲ್ಲಿ ಮುಷ್ಕರವನ್ನು ಹೈಕೋರ್ಟ್ ತಡೆದರೂ ಪ್ರಯೋಜನವಾಗಲಿಲ್ಲ. ಇದನ್ನು ವಿರೋಧಿಸಿ ನೌಕರರು ಪ್ರತಿಭಟನೆ ನಡೆಸಿದರು. ಪಾಲಕ್ಕಾಡ್‍ನ ಕಂಚಿಕೋಡ್ ಕಿನ್‍ಫ್ರಾ ತಲುಪಿದ ನೌಕರರನ್ನು ಮುಷ್ಕರ ನಿರತರು ಬೆದರಿಸಿ ವಾಪಸ್ ಕಳುಹಿಸಿದ್ದಾರೆ. ಅಲಪ್ಪುಳದಲ್ಲಿ ಪ್ರತಿಭಟನಾಕಾರರು ಹೌಸ್‍ಬೋಟ್‍ಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿದರು.
ಕೋಝಿಕ್ಕೋಡ್ ನಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು. ಮುಷ್ಕರ ನಿರತರು ಸರ್ವಿಸ್ ಆಟೋದ ಚಕ್ರದ ಗಾ|ಳಿ ತೆಗೆದರು. ವಾಲಿಬಾಲ್ ಪಂದ್ಯವೊಂದರಲ್ಲಿ ಭಾಗವಹಿಸಿದ್ದ ರೆಫರಿಯನ್ನು ರೈಲು ನಿಲ್ದಾಣಕ್ಕೆ ಹೋಗುವಾಗ ಆಟೋದಿಂದ ಕೆಳಗಿಳಿಸಲಾಯಿತು. ಗೋವಿಂದಪುರಂ ನಿವಾಸಿಗಳ ಆಟೋ ಕೂಡ ಪ್ರತಿಭಟನಾಕಾರರಿಂದ ಜಖಂಗೊಂಡಿದೆ.
ಕಾಸರಗೋಡಲ್ಲೂ ಬಹುತೇಕ ಅ|ಂಗಡಿ ಮುಗ್ಗಟ್ಟುಗಳು ತೆರೆದಿಲ್ಲ. ಒಳ ಗ್ರಾಮೀಣ ಪ್ರದೇಶಗಳ ಅಂಗಡಿಗಳು ತೆರೆದಿವೆ. ಕೆಲವೆಡೆ ಬೆಳಿಗ್ಗೆ ಎಡ ರಂಗದ ಯೂನಿಯನ್ ನ ಪ್ರತಿಭಟನಕಾರರು ಬೀದಿಯಲ್ಲಿ ಮೆರವಣಿಗೆ ನಡೆಸಿ ಜೊತೆಗೆ ತೆರೆದಿದ್ದ ವ್ಯಾಪಾರಿಗಳನ್ನು ಬೆದರಿಸಿ ಮುಚ್ಚಿಸಿದ ದೃ|ಶ್ಯ ಕಂಡುಬಂದಿದೆ.





