ಕಾಸರಗೋಡು: ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಧಿಕೃತವಾಗಿ ಸಾಗಿಸಲೆತ್ನಿಸಿದ ಒಂದುವರೆ ಕಿಲೋ ಚಿನ್ನ ವಶಪಡಿಸಿಕೊಂಡಿರುವ ಕಸ್ಟಂಸ್ ಇಲಾಖೆ ಅಧಿಕಾರಿಗಳು ಕಾಸರಗೋಡು ನಿವಾಸಿಯನ್ನು ಬಂಧಿಸಿದ್ದಾರೆ.
ಕಾಸರಗೋಡು ಪಳ್ಳಂ ನಿವಾಸಿ ಸಹದ್ ಮಹಮ್ಮದ್ಕುಞÂ ಬಂಧಿತ. ಶಾರ್ಜಾದಿಂದ ಆಗಮಿಸಿದ ಏರ್ ಅರೇಬಿಯಾ ವಿಮಾನದಲ್ಲಿ ಬಂದಿಳಿದ ಈತನನ್ನು ತಪಾಸಣೆ ನಡೆಸಿದಾಗ ಒಂದು ಕಿಲೋ ಚಿನ್ನ ಪೇಸ್ಟ್ ರೂಪದಲ್ಲಿ, ಅರ್ಧ ಕೆ.ಜಿ ಕ್ಯಾಪ್ಸೂಲ್ ಹಾಗೂ ರೀಚಾರ್ಜ್ ಬ್ಯಾಟರಿಯೊಳಗೆ ತಗಡಿನ ರೂಪದಲ್ಲಿ ಹೊದಿಸಿ ಸಾಗಿಸುತ್ತಿರುವುದನ್ನು ಪತ್ತೆಹಚ್ಚಲಾಗಿತ್ತು. ವಶಪಡಿಸಿಕೊಂಡಿರುವ ಚಿನ್ನದ ಮೌಲ್ಯ 75ಲಕ್ಷ ರೂ. ಅಂದಾಜಿಸಲಾಗಿದೆ.