HEALTH TIPS

ರಾ.ಹೆದ್ದಾರಿ ಅಭಿವೃದ್ಧಿ-ನೆಲೆ ಕಳೆದುಕೊಂಡ ಪಕ್ಷಿಗಳ ದಾಹ ತಣಿಸಲು ಸಜ್ಜಾದ ಮೊಗ್ರಾಲ್ ಜನತೆ

                                   

         ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಬೃಹತ್ ಹಾಗೂ ಪುರಾತನ ಮರಗಳು ಕೊಡಲಿ ಏಟಿಗೆ ಧರಾಶಾಯಿಯಾಗಿದ್ದು, ಇದರಲ್ಲಿ ಆಶ್ರಯಪಡೆಯುತ್ತಿದ್ದ ನೂರಾರು  ಪಕ್ಷಿಗಳು ಅನಾಥವಾಗಿದೆ. ಪ್ರಸಕ್ತ ಹಲವಾರು ಪಕ್ಷಿಗಳು ಸಮೀಪದ ಹಿತ್ತಲುಗಳಿಗೆ ತೆರಳಿ ಗೂಡು ಕಟ್ಟಿಕೊಂಡಿದೆ. ಕೆಲವೊಂದು ಅಪರೂಪದ ಪಕ್ಷಿಗಳೂ ಇದರಲ್ಲಿ ಒಳಗೊಂಡಿದೆ. ಈ ಬಗ್ಗೆ ಮೊಗ್ರಾಲಿನ ನ್ಯಾಷನಲ್ ಫೆÇೀರಂ ಕಾರ್ಯಕರ್ತರು ನಿರಂತರ ಪಕ್ಷಿಗಳ ವೀಕ್ಷಣೆ ನಡೆಸುತ್ತಿದ್ದು, ಇವುಗಳಿಗೆ ಆಹಾರ, ನೀರನ್ನು ಒದಗಿಸುವ ಕೆಲಸ ನಡೆಸುತ್ತಿದ್ದಾರೆ.  

             ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೃಹತ್ ಮರಗಳನ್ನು ಕಡಿದುರುಳಿಸಿ ರಸ್ತೆ ವಿಸ್ತರಿಸಲಾಗುತ್ತಿದೆ. ಈ ಮರಗಳಲ್ಲಿ ವಾಸಿಸುತ್ತಿದ್ದ ಪಕ್ಷಿಗಳು ಬದಲಿ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದೆ., ಸನಿಹದ ಹಿತ್ತಿಲುಗಳಿಗೆ ಗುಂಪಾಗಿ ತೆರಳಿ ಆಶ್ರಯಪಡೆಯುತ್ತಿರುವ ಈ ಹಕ್ಕಿಗಳಿಗೆ ಮಾನವರಿಂದಲೂ ಹೆಚ್ಚಿನ ಉಪಟಳ ಉಂಟಾಗುತ್ತಿದೆ. ಬೇಸಿಗೆ ವಾತಾವರಣ ಪಕ್ಷಿಗಳಲ್ಲಿ ನೀರಿನ ದಾಹ ಹೆಚ್ಚಿಸಿದ್ದು, ಫೋರಂ ಕಾರ್ಯಕರ್ತರು ಪಕ್ಷಿಗಳ ದಣಿವಾರಿಸಲು ಪ್ರಯತ್ನ ಮುಂದುವರಿಸಿದ್ದಾರೆ.  ಬೇಸಿಗೆಯ ವಾತಾವರಣದಿಂದಾಗಿ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದ್ದಂತೆ ಕಾರ್ಯಕರ್ತರು ಪಕ್ಷಿಗಳಿಗೆ ನೀರುಣಿಸಲು ಯೋಜನೆ ಹಮ್ಮಿಕೊಂಡಿದ್ದಾರೆ. ರಾಷ್ಟ್ರೀಯ ವೇದಿಕೆ ಅಧ್ಯಕ್ಷ ಎ.ಎಂ.ಸಿದ್ದೀಕ್ ರಹಮಾನ್ ಹಾಗೂ ಕಾರ್ಯಕಾರಿ ಸದಸ್ಯ ಫೋರಂ ಸದಸ್ಯರೆಲ್ಲರೂ  ತಮ್ಮ ಮನೆ ಹಿತ್ತಲಿನಲ್ಲಿ ನೀರಿನ ಟ್ಯಾಂಕ್ ಸ್ಥಾಪಿಸುವ ಮೂಲಕ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ನಡೆಸಲಿರುವುದಾಗಿ ಫಾರಂ ಕಾರ್ಯಕರ್ತ ಅಬ್ದುಲ್ಲಕುಞÂ ತಿಳಿಸಿದ್ದಾರೆ.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries