HEALTH TIPS

ಭಾರತದ ನೆಲದಲ್ಲಿ ಯುಎಸ್ v/s ರಷ್ಯಾ? ಲಾವ್ರೊವ್ ಭೇಟಿಯೊಂದಿಗೆ, ಅಮೆರಿಕದ ಉನ್ನತ ಅಧಿಕಾರಿ ಈ ವಾರ ದೆಹಲಿಗೆ ಆಗಮನ

             ನವದೆಹಲಿ: ಕಾಕತಾಳೀಯ ಎಂಬಂತೆ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಅವರೊಂದಿಗೆ ಉಕ್ರೇನ್ ಮೇಲಿನ ದಾಳಿ ವಿಚಾರವಾಗಿ ರಷ್ಯಾದ ವಿರುದ್ದ ಅಮೆರಿಕ ಹೇರಿರುವ ಆರ್ಥಿಕ ನಿರ್ಬಂಧಗಳ ಪ್ರಮುಖ ವಿನ್ಯಾಸಕಾರ ಎಂದು ಹೆಸರಾದ  ಯುಎಸ್ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ  ದಲೀಪ್ ಸಿಂಗ್ ಕೂಡಾ ಈ ವಾರ ನವದೆಹಲಿಗೆ ಆಗಮಿಸುತ್ತಿದ್ದಾರೆ.

                ಸಿಂಗ್ ಭೇಟಿ ವೇಳೆಯಲ್ಲಿ ಮುಂದಿನ ತಿಂಗಳು ವಾಷಿಂಗ್ಟನ್‌ನಲ್ಲಿ ನಡೆಯಲಿರುವ ಮುಂಬರುವ '2+2' ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮಾತುಕತೆ ಕುರಿತಂತೆ ಸಿದ್ಧತೆ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಏಪ್ರಿಲ್ 11 ರ ಅಜುಬಾಜಿನಲ್ಲಿ ಮಾತುಕತೆ ನಡೆಯುವ ಸಾಧ್ಯತೆಯಿದೆ. 

                ಲಾವ್ರೊವ್ ಭಾರತಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಸಮಯದಲ್ಲಿಯೇ ಅಮೆರಿಕ ಅಧಿಕಾರಿಯ ಭಾರತ ಭೇಟಿ ಪ್ರಸ್ತಾಪದ ವಿವರಗಳು ಕೇಳಿಬರುತ್ತಿವೆ. ಆದರೆ. ಅಮೆರಿಕದ ದಲೀಪ್ ಸಿಂಗ್ ಅವರ ಭಾರತ ಭೇಟಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಚೀನಾದ ಎರಡು ದಿನಗಳ ಭೇಟಿ ಮುಕ್ತಾಯವಾದ ನಂತರ ಗುರುವಾರ ಸಂಜೆ ಅಥವಾ ಶುಕ್ರವಾರ ಬೆಳಗ್ಗೆ ಲಾವ್ರೋವ್ ಭಾರತಕ್ಕೆ ಬರುವ ಸಾಧ್ಯತೆಯಿದೆ. 

               ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ಜರ್ಮನ್ ವಿದೇಶಾಂಗ ಮತ್ತು ಭದ್ರತಾ ನೀತಿ ಸಲಹೆಗಾರ ಜೆನ್ಸ್ ಪ್ಲಾಟ್ನರ್ ಸೇರಿದಂತೆ ದೇಶಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ಭೇಟಿಗಳ ನಡುವೆಯೇ ಸಿಂಗ್ ಅವರ ಭಾರತ ಪ್ರವಾಸದ ಮಾತುಗಳು ಕೇಳಿಬರುತ್ತಿದೆ. 

                ಮಾರ್ಚ್ 31 ರಂದು ಟ್ರಸ್ ಭಾರತಕ್ಕೆ ಭೇಟಿ ನೀಡುತ್ತಿದ್ದರೆ.  ಪ್ಲಾಟ್ನರ್ ಬುಧವಾರ ಹೊಸ ದೆಹಲಿಗೆ ಒಂದು ದಿನದ ಪ್ರವಾಸವನ್ನು ನೀಡಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. 

             ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆಗಾಗಿ ಸಿದ್ಧತೆ ನಡೆಸಲಾಗಿದೆ.  ಕಳೆದ ವಾರ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries