HEALTH TIPS

ಮನೋವೈದ್ಯಕೀಯ ಆಸ್ಪತ್ರೆ ಮೇಲೆ ರಷ್ಯಾಪಡೆಗಳಿಂದ ದಾಳಿ- ಉಕ್ರೇನ್ ಆರೋಪ

            ಕೀವ್: ಪೂರ್ವ ಉಕ್ರೇನ್ ನ ಇಝಿಯಂ ಪಟ್ಟಣ ಬಳಿಯಿರುವ ಮನೋವೈದ್ಯಕೀಯ ಆಸ್ಪತ್ರೆಯೊಂದರ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿರುವುದಾಗಿ ಉಕ್ರೇನ್ ಆರೋಪಿಸಿದೆ. 

           ಮನೋವೈದ್ಯಕೀಯ ಆಸ್ಪತ್ರೆ ಮೇಲಿನ ದಾಳಿಯನ್ನು ನಾಗರಿಕರ ಮೇಲಿನ ಅಮಾನುಷ ದಾಳಿ ಎಂದು ಕರೆದಿರುವ ಖಾರ್ಕಿವ್ ಪ್ರದೇಶ ಗರ್ವರ್ ಓಲೆಹ್ ಸಿನೆಗುಬೊವ್, ರಷ್ಯಾ ಪಡೆ ದಾಳಿ ನಡೆಸಿದ ಸಂದರ್ಭದಲ್ಲಿ 330 ಜನರು ಆಸ್ಪತ್ರೆಯಲ್ಲಿದ್ದರು. ಗಾಯಗೊಂಡಿರುವ 73 ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ದಾಳಿಯಿಂದ ಸಾವನ್ನಪ್ಪಿರುವವರ ಸಂಖ್ಯೆ ಇನ್ನೂ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ. 

             ರಷ್ಯಾದ ಯುದ್ಧ ನಾಗರಿಕರ ಮೇಲಿನ ಅಪರಾಧವಾಗಿದೆ. ಉಕ್ರೇನ್ ದೇಶದ ವಿರುದ್ಧದ ನರಮೇಧವಾಗಿದೆ ಎಂದು  ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಸಿನೆಗುಬೊವ್ ಬರೆದಿದ್ದಾರೆ.ರಷ್ಯಾ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿಲ್ಲ ಎಂದು ಹೇಳುತ್ತಿದೆ. ಆದರೆ, ಮರಿಯುಪೋಲ್ ನಲ್ಲಿ ಆಸ್ಪತ್ರೆಯೊಂದರ ಮೇಲೆ ಬುಧವಾರ ನಡೆದ ಬಾಂಬ್ ದಾಳಿಯಲ್ಲಿ ಒಂದು ಮಗು ಸೇರಿದಂತೆ  ಮೂವರು ನಾಗರಿಕರು ಸಾವನ್ನಪ್ಪಿರುವುದಾಗಿ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. 

          ರಷ್ಯಾದ ಪಡೆಗಳು ಖಾರ್ಕಿವ್‌ನ ವಸತಿ ಪ್ರದೇಶಗಳಿಗೆ ಒಂದೇ ದಿನದಲ್ಲಿ 89 ಬಾರಿ ಶೆಲ್ ದಾಳಿ ನಡೆಸಿವೆ ಆದರೆ ಪರಮಾಣು ಪ್ರಯೋಗಾಲಯವನ್ನು ಒಳಗೊಂಡಿರುವ ಸಂಸ್ಥೆಗೆ ಹಾನಿಯಾದ ನಂತರ ನಾಗರಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಸಿನೆಗುಬೊವ್ ಗುರುವಾರ ಹೇಳಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries