HEALTH TIPS

ಮಂಜೇಶ್ವರ ಗೋವಿಂದ ಪೈಗಳ ಜನ್ಮದಿನಾಚರಣೆ

               ಮಂಜೇಶ್ವರ: ಕಾಲಘಟ್ಟಗಳ ಏಳು-ಬೀಳುಗಳ ಸಮಗ್ರ ಚಿತ್ರಣಗಳನ್ನು ತೆರೆದಿಡುವ, ಸಾಮಾಜಿಕ ಐಕ್ಯತೆ , ಸೌಹಾರ್ಧತೆಗಳಿಗೆ ಬೆಂಬಲ ನೀಡಿ ಭಾಷೆ, ಸಂಸ್ಕøತಿಗಳ ಕಳಶವಿಟ್ಟ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ಈ ಮಣ್ಣಿನ ಸಮೃದ್ದತೆಯ ದ್ಯೋತಕ ಎಂದು ಮಾಜಿ ಶಾಸಕ, ಲೈಬ್ರರಿ ಕೌನ್ಸಿಲ್ ಜಿಲ್ಲಾಧ್ಯಕ್ಷ ಕೆ.ವಿ.ಕುಂಞÂ್ಞ ರಾಮನ್ ತಿಳಿಸಿದರು.


            ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಜಂಟಿ ಆಶ್ರಯದಲ್ಲಿ ಮಂಜೇಶ್ವರದ ಗಿಳಿವಿಂಡು ಆವರಣದಲ್ಲಿ ಬುಧವಾರ ಅಪರಾಹ್ನ ನಡೆದ  ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ  139 ನೇ ಜನ್ಮ ದಿನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


         ಮಂಜೇಶ್ವರ ಗ್ರಾ.ಪಂ. ಅ|ಧ್ಯಕ್ಷೆ ಜೀನ್ ಲವೀನೋ ಮೊಂತೇರೋ ಅ|ಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವರ್ಕಾಡಿ ಗ್ರಾ.ಪಂ. ಅ|ಧ್ಯಕ್ಷೆ ಭಾರತಿ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಧಾರ್ಮಿಕ ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು,ಸಂಘಟಕ ಪ್ರಭಾಕರ ಕಲ್ಲೂರಾಯ ಬನದಗದ್ದೆ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ಹಿರಿಯ ವೈದ್ಯ, ಸಾಹಿತಿ, ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ, ಗೋವಿಂದ ಪೈ ಸ್ಮಾರಕ ಸಮಿತಿಯ ಖಜಾಂಜಿ ಬಿ.ವಿ.ಕಕ್ಕಿಲ್ಲಾಯ ಅವರನ್ನು ಸನ್ಮಾನಿಸಲಾಯಿತು. ಗೋವಿಂದ ಪೈ ಸ್ಮಾರಕ ಸಮಿತಿಯ ಕಾರ್ಯದರ್ಶಿ ಜಯಾನಂದ ಕೆ.ಆರ್.ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸದಸ್ಯ ಡಿ.ಸುಬ್ಬಣ್ಣ ಆಳ್ವ ವಂದಿಸಿದರು. ಬಾಲಕೃಷ್ಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಮಂಜೇಶ್ವರ ಪಂಚಾಯತಿ ಕುಟುಂಬಶ್ರೀ ಸದಸ್ಯೆಯರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries