ಕಾಸರಗೋಡು: ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪುತ್ತಿಗೆ ಕ್ಷೇತ್ರ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ಸುಂದರ ಆರಿಕಾಡಿ ಉದ್ಘಾಟಿಸಿದರು.
ಕಾಂಗ್ರೆಸ್ ಪುತ್ತಿಗೆ ಕ್ಷೇತ್ರ ಸಮಿತಿ ಅಧ್ಯಕ್ಷ ಸುಲೈಮಾನ್ ಊಜಂಪದವ್ ಅಧ್ಯಕ್ಷತೆ ವಹಿಸಿದ್ದರು. ಕಮರುದ್ದೀನ್ ಪಡಲಡುಕ್ಕ, ಅಬೂಬಕ್ಕರ್ ಮುಗು, ಕೇಶವ, ಎಸ್. ಆರ್, ಸಲೀಂ ಕಟ್ಟತ್ತಡುಕ್ಕ, ಶುಕೂರ್ ಕಾಣಾಜೆ, ಜುನೈದ್ ಉರುಮಿ, ರಫೀಕ್ ಕುಂಡಾರ್, ರಾಜಿ. ಕೆ, ಬಾಲಕೃಷ್ಣ ಗುತ್ತು, ಹಮೀದ್ ಮಣಿಯಂಪಾರ, ರಹೀಮ್ ಪಂದಲ್, ಮೊಹಮ್ಮದ್ ಮುಂಡಿತ್ತಡ್ಕ, ಅಲಿ ಪಾಡಲಡ್ಕ ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರು ಖಾಲಿ ಅಡುಗೆ ಅನಿಲ ಜಾಡಿಯನ್ನು ಎತ್ತಿಕೊಂಡು ಹಾಗೂ ಸ್ಕೂಟರನ್ನು ತಳ್ಳಿಕೊಂಡು ಸಾಗುವ ಮೂಲಕ ಪರತಿಭಟನೆ ನಡೆಸಿದರು.





