ಕಾಸರಗೋಡು: ಎನ್‍ಜಿಓ ಸಂಘ್ ಜಿಲ್ಲಾ ಸಮಿತಿ ವತಿಯಿಂದ ವಿವಿಧ ಬೇಡಿಕೆ ಮುಂದಿರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಯಿತು. ಸಹಭಾಗಿತ್ವ ಪಿಂಚಣಿ ಯೋಜನೆ ಹಿಂದಕ್ಕೆ ಪಡೆದು ಎಡರಂಗ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳಲು ಮುಂದಾಗಬೇಕು, ಸರ್ಕಾರದ ಕೊಡುಗೆಯೊಂದಿಗೆ ಮೆಡಿ ಸೆಪ್ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಬೇಕು ಹಾಗೂ ಲೀವ್ ಸರಂಡರ್ ಮರುಸ್ಥಾಪಿಸುವಂತೆ ಆಗ್ರಹಿಸಿ ಧರಣಿ ನಡೆಸಲಾಯಿತು.
ಜಿಲ್ಲಾ ಸಮಿತಿಯ ಶಿಫಾರಸಿನ ಮೇರೆಗೆ ಎನ್‍ಜಿಒ ಸಂಘ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷ ಪಿ.ಎಸ್. ಪೀತಾಂಬರನ್ ಧರಣಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷೆ ಸಿ.ವಿಜಯಾ ಅಧ್ಯಕ್ಷತೆ ವಹಿಸಿದ್ದರು. ಕೆ.ರತೀಶ್ ಕೃಷ್ಣನ್, ಕೆ. ರಂಜಿತ್, ಎಂ.ಗಂಗಾಧರ. ಕೆ.ಕರುಣಾಕರ ಮುಂತಾದವರು ಉಪಸ್ಥಿತರಿದ್ದರು.





