ಕುಂಬಳೆ: ಕುಂಬಳೆ ಸನಿಹದ ಆರಿಕ್ಕಾಡಿ ಪಾರೆ ಶ್ರೀ ಭಗವತೀ ಆಲಿಚಾಮುಂಡಿ ದೈವಸ್ಥಾನ ಕಳಿಯಾಟಮಹೋತ್ಸವಕ್ಕೆ ಗುರುವಾರ ಧ್ವಜಾರೋಹಣ ನಡೆಯಿತು. ಭಗವತೀ ದರ್ಶನ ಸೇವೆ, ಕೆ<ಡಸೇವೆ, ಪ್ರದಕ್ಷಿಣೆ ಬಲಿ, ಬಿಂಬದರ್ಶನ, ಪೂವಣ್ಣ ದೈವದ ವೆಳ್ಳಾಟ ನಡೆಯಿತು. ಪ್ರತಿದಿನ ಭಜನೆ, ಶ್ರೀ ದೈವಗಳ ವೆಳ್ಳಾಟ, ದೈವಗಳ ನರ್ತನಸೇವೆ ನಡೆಯಲಿರುವುದು. ಏ. 6ರ ವರೆಗೆ ಕಳಿಯಾಟ ಮಹೋತ್ಸವ ನಡೆಯುವುದು.




