ಕಾಸರಗೋಡು: ವಿದ್ಯಾರ್ಥಿಗಳ ಪ್ರಯಾಣ ದರ ಏರಿಕೆ ಮಾಡದೆ ಬಸ್ ಟಿಕೆಟ್ ದರ ಏರಿಕೆ ಮಾಡಿರುವುದು ಸಮರ್ಪಕವಲ್ಲ ಎಂದು ಬಸ್ ಆಪರೇಟರ್ಸ್ ಫೆಡರೇಶನ್ ತಾಲೂಕು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣದ ಕನಿಷ್ಠ ದರ ಹತ್ತು ರೂ. ಮತ್ತು ವಿದ್ಯಾರ್ಥಿ ರಿಯಾಯಿತಿ ದರ 5ರೂ. ಆಗಿ ಹೆಚ್ಚಿಸುವಂತೆ ನ್ಯಾಯಮೂರ್ತಿ ರಾಮಚಂದ್ರನ್ ಆಯೋಗವು 2020ರಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಅಂದು ಡೀಸೆಲ್ ಬೆಲೆ 78 ರೂ. ಆಗಿದ್ದರೆ, ಇಂದು ನೂರರ ಅಂಚಿಗೆ ತಲುಪಿದೆ. ಕನಿಷ್ಠ ದರವನ್ನು 12 ರೂ.ಗೆ ಮತ್ತು ವಿದ್ಯಾರ್ಥಿ ಶುಲ್ಕವನ್ನು 6 ರೂ.ಗೆ ಹೆಚ್ಚಿಸಬೇಕು. ಇಲ್ಲದಿದ್ದರೆ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡಿ, ಡೀಸೆಲ್‍ಗೆ ಸಬ್ಸಿಡಿ ನೀಡಲು ಸರ್ಕಾರ ಮುಂದಾಗಬೇಕು ಎಂದು ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಘಟಕ ಅಧ್ಯಕ್ಷ ಕೆ. ಗಿರೀಶ್ ಆಗ್ರಹಿಸಿದ್ದಾರೆ. ಈ ಬಗ್ಗೆ ಬಸ್ ಮಾಲಿಕರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಎ ಮುಹಮ್ಮದ್ ಕುಞÂ, ಮುಹಮ್ಮದ್ ಕುಞÂ ಪಿ. ಎ, ಬಾಲಕೃಷ್ಣನ್, ಸಲೀಂ ಮತ್ತು ಇಬ್ರಾಹಿಂ ಟಿ.ವಿ ಉಪಸ್ಥಿತರಿದ್ದರು.




