HEALTH TIPS

ರಷ್ಯಾದಲ್ಲಿ ಕಚೇರಿ ಬಂದ್ ಮಾಡಿದ ಇನ್ಫೋಸಿಸ್ ಕಂಪನಿ

            ಬೆಂಗಳೂರು: ಭಾರತದ ಪ್ರಮುಖ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್ ರಷ್ಯಾದಲ್ಲಿ ತನ್ನ ಕಚೇರಿ ಬಂದ್ ಮಾಡಿದೆ.  ಉಕ್ರೇನ್ – ರಷ್ಯಾ ಯುದ್ಧದಿಂದಾಗಿ ಇನ್ಫೋಸಿಸ್ ತನ್ನ ಕಚೇರಿಯನ್ನ ಬಂದ್ ಮಾಡಿದೆ.

              ಈ ಬಗ್ಗೆ ಪ್ರತಿಕ್ರಿಯಿಸಿದ ಇನ್ಫೋಸಿಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್, ರಷ್ಯಾ- ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಪರ್ಯಾಯ ಆಯ್ಕೆಗಳನ್ನು ಅನುಸರಿಸಲಾಗುತ್ತಿದೆ ಎಂದರು.

               ಬುಧವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸಲೀಲ್ ಪರೇಖ್,  ಯುದ್ಧದ ಪರಿಸ್ಥಿತಿಯನ್ನು ನೋಡಿದರೆ ನಾವು ನಮ್ಮ ವ್ಯವಹಾರ ಮತ್ತು ಎಲ್ಲಾ ಕೆಲಸಗಳನ್ನು ರಷ್ಯಾ ಕೇಂದ್ರಗಳಿಂದ ಹೊರಗೆ ಸ್ಥಾಪಿಸಲು  ಪ್ರಾರಂಭಿಸಿದ್ದೇವೆ ಎಂದು ಹೇಳಿದರು.ಇನ್ಫೋಸಿಸ್ ರಷ್ಯಾದಲ್ಲಿ 100 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ. ನಾವು ರಷ್ಯಾದಲ್ಲಿ ಗ್ರಾಹಕರನ್ನು ಹೊಂದಿಲ್ಲ. ರಷ್ಯಾದಲ್ಲಿ ನಾವು ಮಾಡುವ ಕೆಲಸವು ಜಾಗತಿಕ ಗ್ರಾಹಕರಿಗಾಗಿ. ಹೀಗಾಗಿ ನಾವು ಕಚೇರಿಯನ್ನ ಬಂದ್ ಮಾಡುತ್ತಿದ್ದೇವೆ. ಇದರಿಂದ ನಮ್ಮ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

               ಕಂಪನಿಯು ರಷ್ಯಾದಲ್ಲಿರುವ ತನ್ನ ಉದ್ಯೋಗಿಗಳನ್ನು ಇತರ ಭೌಗೋಳಿಕ ಪ್ರದೇಶಗಳಲ್ಲಿ, ವಿಶೇಷವಾಗಿ ಪೂರ್ವ ಯುರೋಪ್‌ನಲ್ಲಿ ಸ್ಥಳಾಂತರಿಸಲು ಮತ್ತು ಅಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

            ಒರಾಕಲ್ ಕಾರ್ಪ್ ಮತ್ತು SಂP Sಇ ಸೇರಿದಂತೆ ಹಲವಾರು ಇತರ ಜಾಗತಿಕ ಐಟಿ ಮತ್ತು ಸಾಫ್ಟ್ ವೇರ್ ಕಂಪನಿಗಳು ಯುದ್ಧದ ಬಳಿಕ ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries